Site icon Kundapra.com ಕುಂದಾಪ್ರ ಡಾಟ್ ಕಾಂ

ಪಣ್ಕ್ ಮಕ್ಕಳ್ ಖ್ಯಾತಿಯ ಚಿತ್ರ ಸಾಹಿತಿ ಅಶೋಕ್ ನೀಲಾವರ ನಿಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪ್ರ ಕನ್ನಡದ ಮೊದಲ ಹಾಗೂ ಪ್ರಸಿದ್ಧ ಆಲ್ಬಂ ಸಾಂಗ್ ‘ಪಣ್ಕ್ ಮಕ್ಕಳ್’ಗೆ ಸಾಹಿತ್ಯ ಬರೆದಿದ್ದ ಅಶೋಕ್ ನೀಲಾವರ (45) ಸೋಮವಾರ ನಿಧನರಾಗಿದ್ದಾರೆ.

ಉಡುಪಿ ಜಿಲ್ಲೆಯ ನೀಲಾವರದವರಾದ ಅಶೋಕ್ ಅವರು ಬೆಳಗಾವಿ ಜಿಲ್ಲೆ ಗೋಕಾಕ್‌ಗೆ ಬೇಕರಿಯ ಇಂಟೀರಿಯರ್ ಡಿಸೈನ್ ಕೆಲಸಕ್ಕಾಗಿ ತೆರಳಿದ್ದ ಸಂದರ್ಭ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಚಿತ್ರಸಾಹಿತಿಯಾಗಿ ಗುರುತಿಸಿಕೊಂಡಿದ್ದ ಅಶೋಕ್ ಅವರು, ಪಣ್ಕ್ ಮಕ್ಕಳ್ ಭಾಗ -1 ಹಾಗೂ ಪಣ್ಕ ಮಕ್ಕಳ್ ಭಾಗ-2ರ ಎಲ್ಲಾ ಹಾಡುಗಳಿಗೂ ಸಾಹಿತ್ಯ ಬರೆದಿದ್ದರು. ಮೃಗಶಿರ, ಕತ್ತಲೆಕೋಣೆ, ಬೀಟ್ ಚಿತ್ರದ ಒಂದೊಂದು ಹಾಡಿಗೂ ಸಾಹಿತ್ಯ ಬರೆದಿದ್ದರು.

ಮೃತರು ಮಗಳು, ಮಡದಿ ಹಾಗೂ ಕುಟುಂಬಿಕರನ್ನು ಅಗಲಿದ್ದಾರೆ. ಮೃತರ ಅಗಲಿಕೆಗೆ ಸಂಗೀತ ನಿರ್ದೇಶಕ ರವಿ ಬಸ್ರೂರು, ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

 

Exit mobile version