Site icon Kundapra.com ಕುಂದಾಪ್ರ ಡಾಟ್ ಕಾಂ

ಯೋಗಿತಾ ಬಾಲಿ ಅವರಿಗೆ ಲೀಡರ್‌ಶಿಪ್ & ವುಮನ್ ಎಂಪವರ್‌ಮೆಂಟ್ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಟಾಕ್ ಟು ಬ್ಯಾಂಕ್ ಡಾಟ್ ಕಾಂನ ಸಹ ಸಂಸ್ಥಾಪಕಿ ಯೋಗಿತಾ ಬಾಲಿ ಅವರು ಬೆಂಗಳೂರಿನ ಲವ್ ಇಂಡಿಯಾ ರೀಜನಲ್ ಇನ್ಸಿಟ್ಯೂಟ್ ಕೊಡಮಾಡಿದ 2020ನೇ ಸಾಲಿನ ಲೀಡರ್‌ಶಿಪ್ & ವುಮನ್ ಎಂಪವರ‍್ಮೆಂಟ್ ಪ್ರಶಸ್ತಿಗೆ ಭಾಜನರಾಗಿದ್ದು, ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದರು.

ಮಿಸ್ ವೆಲ್‌ನೆಸ್ ಇಂಡಿಯಾ 2020ರ ಚಾಂಪಿಯನ್ ಅಟಿಟ್ಯೂಡ್ ಜಯಿಸಿದ್ದ ಯೋಗಿತಾ ಅವರು, ಉತ್ತಮ ಕ್ರೀಡಾಪಟುವಾಗಿ, ಕಲಾವಿದೆಯಾಗಿ, ಫೈನಾಶಿಯಲ್ ಎಕ್ಸ್‌ಪರ್ಟ್ ಆಗಿ, ಮಹಿಳಾಮಣಿಯರಿಗೆ ಪ್ರೇರಕಿಯಾಗಿ ಗುರುತಿಸಿಕೊಂಡಿದ್ದಾರೆ. ಅವರು ಬೈಂದೂರು ತಾಲೂಕಿನ ನಾವುಂದದ ಚಂದ್ರಶೇಖರ್ ಹಾಗೂ ಸಿಂಗಾರಿ ಟೀಚರ್ ಅವರ ಪುತ್ರಿಯಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

Exit mobile version