Kundapra.com ಕುಂದಾಪ್ರ ಡಾಟ್ ಕಾಂ

ರೈತ, ಕೃಷಿಕೂಲಿ ಕಾರ್ಮಿಕರ ಪ್ರತಿಭಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ, ಜನ ವಿರೋಧಿ ನೀತಿಗಳ ವಿರುದ್ಧ ಕೇಂದ್ರ ಕಾರ್ಮಿಕ ಸಂಘಟನೆಗಳ ಕರೆಯಂತೆ ಬೈಂದೂರಿನ ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್‌ನಲ್ಲಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಯಿತು.

ಐಕ್ಯ ಹೋರಾಟವನ್ನು ತೀವ್ರಗೊಳಿಸುವ ಮೂಲಕ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯನ್ನು ನಿರಾಕರಿಸಿ ಪ್ರತಿರೋಧಿಸಲು ಮತ್ತು ಪರಿಹಾರ ಹಾಗೂ ಪರ್ಯಾಯ ರೂಪಿಸಲು ಮುಂದಾಗಬೇಕೆಂದು ಸಿಐಟಿಯು ಮುಖಂಡ ರಾಜೀವ ಪಡುಕೋಣೆ ಮುಷ್ಕರವನ್ನು ಉದ್ದೇಶಿಸಿ ಮಾತನಾಡಿದರು.

ಸಿಐಟಿಯು ಮುಖಂಡ ವೆಂಕಟೇಶ್ ಕೋಣಿ, ಸುಶೀಲ ನಾಡಾ ಸಭೆಯನ್ನುಧ್ಧೇಶಿಸಿ ಮಾತನಾಡಿದರು. ಉದಯ ಗಾಣಿಗ, ಮಂಜು ಪಡುವರಿ, ಜಯಶ್ರೀ ಪಡುವರಿ, ಅಮ್ಮಯ್ಯ ಬಿಜೂರು, ಮಾಧವ, ಶ್ರೀಧರ ಉಪ್ಪುಂದ, ನಾಗರತ್ನ ನಾಡಾ, ಸಿಂಗಾರಿ ನಾವುಂದ, ರಾಮ ಖಂಬದಕೋಣೆ ಮುಷ್ಕರದಲ್ಲಿ ಉಪಸ್ಥಿತರಿದ್ದರು. ಸಿಐಟಿಯು ಮುಖಂಡ ಗಣೇಶ್ ತೊಂಡೆಮಕ್ಕಿ ಸ್ವಾಗತಿಸಿದರು. ರೊನಾಲ್ಡ್ ರಾಜೇಶ್ ವಂದಿಸಿದರು.

Exit mobile version