Kundapra.com ಕುಂದಾಪ್ರ ಡಾಟ್ ಕಾಂ

ಭೀಮ ಘರ್ಜನೆ ಜಿಲ್ಲಾ ಕಚೇರಿಯಲ್ಲಿ ಭಾರತ ಸಂವಿಧಾನ ಅರ್ಪಣಾ ದಿನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಾರತ ಸಂವಿಧಾನ ಅರ್ಪಣಾ ದಿನವನ್ನ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ ಜಿಲ್ಲಾ ಕಚೇರಿಯಲ್ಲಿ ಮಾಲಾರ್ಪಣಾ ಮಾಡಿ ಸಂವಿಧಾನ ಅರ್ಪಣಾ ದಿನವನ್ನ ಆಚರಿಸಲಾಯಿತು.

ರಾಜ್ಯ ಸಂಚಾಲಕ ಉದಯ್ ಕುಮಾರ್ ತಲ್ಲೂರು ಮಾಲಾಪರ್ಣೆ ಮಾಡಿ, ಸಂವಿಧಾನ ಹಂತ,ಹಂತವಾಗಿ ಬದಲಾವಣೆ ಮಾಡುತ್ತಿದ್ದು ದಲಿತರು ಹಿಂದುಳಿದ ವರ್ಗ ಅಲ್ಪ ಸಂಖ್ಯಾತರು ಎಚ್ಚೆತ್ತುಕೊಳ್ಳಬೇಕೆಂದು ಕರೆ ನೀಡಿದರು.

ಜಿಲ್ಲಾ ಸಂಚಾಲಕ ಚಂದ್ರ ಅಲ್ತಾರ್, ತಾಲೂಕು ಸಂಘಟನಾ ಸಂಚಾಲಕ ಕೆ.ಎಸ್ ವಿಜಯ್, ಗೋಪಾಲ ವಿ.ಬೈಂದೂರು ತಾಲೂಕು ಸಂಚಾಲಕ ಚಂದ್ರಮ ತಲ್ಲೂರು, ಸಂದೇಶ್ ನಾಡ, ಸಂತೋಷ್ ಕುಮಾರ್ ಕಿರಿಮಂಜೇಶ್ವರ, ನಗರ ಶಾಖೆ ಸಂಚಾಲಕ ಸುರೇಶ್ ಬಾಬು, ಹಾಗೂ ತಲ್ಲೂರು ಶಾಖೆಯ ಉದಯ್ ಕೆ.ಮತ್ತು ಅರುಣ್ ಉಪಸ್ಥಿತರಿದ್ದರು.

Exit mobile version