Kundapra.com ಕುಂದಾಪ್ರ ಡಾಟ್ ಕಾಂ

ಕೋಟ: ಅಪಘಾತದಲ್ಲಿ ಯುವತಿ ಸಾವು

ಕುಂದಾಪ್ರ ಡಾಟ್ ಕಾಂ ಸುದ್ದಿ
ಕೋಟ: ಕೋಟದ ಕೃಷ್ಣಭವನ ಹೋಟೆಲ್ ಎದುರುಗಡೆ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಶನಿವಾರ ನಡೆದ ಅಪಘಾತದಲ್ಲಿ ಒಬ್ಬರು ಯುವತಿ ಮೃತರಾಗಿದ್ದು, ಇನ್ನೊಬ್ಬರು ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೇಳೂರು ನಿವಾಸಿ ಶ್ರೇಯಾ ಶಾನುಭಾಗ್ (24) ಮೃತರು. ಉಜಿರೆ ಮೂಲದ ಪ್ರಜ್ಞಾ (25) ಗಾಯಾಳು. ಕುಂದಾಪುರದಿಂದ ಬ್ರಹ್ಮಾವರ ಕಡೆಗೆ ಸ್ಕೂಟಿಯಲ್ಲಿ ಬರುತ್ತಿದ್ದಾಗ ಫಾರ್ಚೂನ್ ವಾಹನ ಡಿಕ್ಕಿ ಹೊಡೆದು ಇಬ್ಬರೂ ರಸ್ತೆಗೆ ಬಿದ್ದಿದ್ದರು ಎಂದು ತಿಳಿಸಲಾಗಿದೆ. ಪರಾರಿಯಾಗಲೆತ್ನಿಸಿದ ಫಾರ್ಚೂನ್ ವಾಹನವನ್ನು ಕೋಟದ ಜೀವನ್ ಮಿತ್ರ ಆಂಬುಲನ್ಸ್ ಮಾಲೀಕ ನಾಗರಾಜ್ ಪುತ್ರನ್ ಅವರ ಸಮಯ ಪ್ರಜ್ಞೆಯಿಂದ ಸಾಸ್ತಾನ ಟೋಲ್ ಬಳಿ ವಾಹನ ತಡೆದು‌ ಕೋಟ ಪೊಲೀಸ್ ಠಾಣೆಗೆ ಒಪ್ಪಿಸಲಾಯಿತು. ಪ್ರಕರಣ ದಾಖಲಾಗಿದೆ.

Exit mobile version