Kundapra.com ಕುಂದಾಪ್ರ ಡಾಟ್ ಕಾಂ

ಜಾತಿ ಗಣತಿ ವರದಿ ಪರಾಮರ್ಶಿಸಿ ಸಲ್ಲಿಕೆ : ಜಯಪ್ರಕಾಶ್ ಹೆಗ್ಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಜಯಪ್ರಕಾಶ್ ಹೆಗ್ಡೆ ಮೊದಲ ಬಾರಿ ಕುಂದಾಪುರಕ್ಕೆ ಬಂದ ಅವರನ್ನು ಅಭಿಮಾನಿಗಳು ಸ್ವಾಗತಿಸಿದರು.

ಬಳಿಕ ಸುದ್ದಿಗಾರೊಂದಿಗೆ ಮಾತನಾಡಿ, ರಾಜ್ಯ ಹಿಂದುಳಿದ ವರ್ಗಗಳ ನೂತನ ಸಮಿತಿ ಅಸ್ತಿತ್ವಕ್ಕೆ ಬಂದ ಬಳಿಕ ವರದಿಯ ಅಧ್ಯಯನ ಹಾಗೂ ಪರಾಮರ್ಶೆ ನಡೆಸಿದ ಬಳಿಕವೇ ಸರ್ಕಾರಕ್ಕೆ ನೀಡಲಾಗುವುದು ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಕಾಂತರಾಜು ಅವರ ನೇತೃತ್ವದ ಸಮಿತಿ ಸಿದ್ಧಪಡಿಸಿದ ಜಾತಿ ಗಣತಿ ಆಯೋಗದ ಬಳಿ ಇದ್ದರೂ, ಅದು ಇನ್ನೂ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ ಆಯೋಗಕ್ಕೆ 5 ಸದಸ್ಯರಲ್ಲಿ ಸಾಮಾಜಿಕ ವಿಜ್ಞಾನ ಪರಿಣಿತೆ, ಮಹಿಳೆ ಸದಸ್ಯೆಯ ನೇಮಕ ಬಾಕಿ ಇದೆ. ಸದಸ್ಯರ ನೇಮಕಾತಿಯ ಮುಖ್ಯಮಂತ್ರಿಗಳ ವಿವೇಚನೆಯದ್ದಾಗಿದೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ.ಕಿಶೋರ್‌ಕುಮಾರ್, ಬಿಜೆಪಿ ಎಸ್.ಸಿ ಮೋರ್ಚಾ ಅಧ್ಯಕ್ಷ ಕೆ.ಎಂ.ಗೋಪಾಲ ಕಳಂಜಿ, ಪ್ರಮುಖರಾದ ಸೋಮಶೇಖರ ಶೆಟ್ಟಿ ಕೆಂಚನೂರು, ಸತೀಶ್ ಹೆಗ್ಡೆ ಮೇರ್ಡಿ, ಶ್ರೀನಿವಾಸ ಕುಂದರ್, ಮೇರ್ಡಿ ದಿನಕರ ಶೆಟ್ಟಿ, ಪ್ರತಾಪ್ ಶೆಟ್ಟಿ ಕೈಲ್ಕೆರೆ, ಗಣೇಶ್ ಭಟ್ ಗೋಪಾಡಿ, ಅನಿಲ್ ಉಪ್ಪೂರು, ಪ್ರಶಾಂತ್ ಸಾರಂಗ ಇದ್ದರು.

Exit mobile version