Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರಿಗೆ ಶೀಘ್ರ ನ್ಯಾಯಾಲಯ: ನ್ಯಾಯಮೂರ್ತಿ ಅಶೋಕ ಎಸ್. ಕಿಣಗಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರಿನಲ್ಲಿ ನ್ಯಾಯಾಲಯಗಳಿಗೆ ನಿವೇಶನ ಕಾಯ್ದಿರಿಸುವ ಪ್ರಕ್ರಿಯೆ ನಡೆಯುತ್ತಿದೆ. ಕಂದಾಯ ಇಲಾಖೆ ನ್ಯಾಯಾಂಗ ಇಲಾಖೆಗೆ ನಿವೇಶನ ಹಸ್ತಾಂತರಿಸಿದ ಬಳಿಕ ನ್ಯಾಯಾಲಯ ಆರಂಭಿಸಲಾಗುವುದು ಎಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ(ಆಡಳಿತ) ಅಶೋಕ ಎಸ್. ಕಿಣಗಿ ಭರವಸೆ ನೀಡಿದರು.

ಉಡುಪಿ ಜಿಲ್ಲಾ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ. ಎನ್ ಅವರೊಂದಿಗೆ ಬೈಂದೂರಿಗೆ ಭೇಟಿನೀಡಿ ಸ್ಥಳ ಪರಿಶೀಲನೆ ನಡೆಸಿದ ಅವರನ್ನು ಭೇಟಿಯಾದ ಬೈಂದೂರು ಹಿತರಕ್ಷಣಾ ವೇದಿಕೆಯ ನಿಯೋಗಕ್ಕೆ ಭರವಸೆ ನೀಡಿದರು.

ಬೈಂದೂರು ತಾಲ್ಲೂಕು ರಚನೆಯಾಗಿ ಮೂರು ವರ್ಷಗಳು ಕಳೆದಿವೆ. ಕುಂದಾಪುರದಿಂದ 35 ಕಿ.ಮೀ. ದೂರದಲ್ಲಿರುವ ಬೈಂದೂರಿನಲ್ಲಿ ನ್ಯಾಯಾಲಯ ಸ್ಥಾಪಿಸಬೇಕು ಎಂಬ ಆಗ್ರಹ ಅದಕ್ಕಿಂತ ಹಿಂದಿನದು. ಈಗಾಗಲೇ ಅದಕ್ಕೆ ಎರಡು ಎಕರೆ ನಿವೇಶನ ಗುರುತಿಸಲಾಗಿದೆ. ಶೀಘ್ರ ಬಾಡಿಗೆ ಕಟ್ಟಡದಲ್ಲಿ ನ್ಯಾಯಾಲಯ ಆರಂಭಿಸಬೇಕು’ ಎಂದು ನಿಯೋಗ ಅವರನ್ನು ವಿನಂತಿಸಿ ಮನವಿ ಸಲ್ಲಿಸಿತು. ವೇದಿಕೆಯ ಅಧ್ಯಕ್ಷ ಜಗದೀಶ ಪಟವಾಲ್, ಕಾರ್ಯದರ್ಶಿ ಪ್ರಕಾಶ ಬೈಂದೂರು, ಸದಸ್ಯ ಸುಬ್ರಹ್ಮಣ್ಯ ಶೇಟ್, ವಕೀಲ ಧನಂಜಯ ಶೆಟ್ಟಿ ನಿಯೋಗದಲ್ಲಿದ್ದರು.

 

Exit mobile version