Kundapra.com ಕುಂದಾಪ್ರ ಡಾಟ್ ಕಾಂ

ಮರವಂತೆ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾ ಸಭೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮರವಂತೆ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಾಧನಾ ಸಮುದಾಯ ಭವನದಲ್ಲಿ ನಡೆಯಿತು.

ಕಳೆದ ಸಾಲಿನಲ್ಲಿ ರೂ7.19 ಲಕ್ಷ ನಿವ್ವಳ ಲಾಭ ಗಳಿಸಿದೆ. ಆ ಹಿನ್ನೆಲೆಯಲ್ಲಿ ಸದಸ್ಯರಿಗೆ ಶೇ 20 ಡಿವಿಡೆಂಡ್ ನೀಡಲು ನಿರ್ಧರಿಸಲಾಯಿತು.

ಸಂಘದ ಅಧ್ಯಕ್ಷ ಶಂಕರ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದಿನ ವರ್ಷದ ವರದಿ ಮತ್ತು ಆಯವ್ಯಯ ಮಂಡಿಸಿದ ವಿಮಲಾ, ಸಂಘವು ಈಗ ದಿನಕ್ಕೆ 850 ಲಿಟರ್ ಹಾಲು ಸಂಗ್ರಹಿಸುತ್ತಿದೆ. ವರ್ಷದಲ್ಲಿ ಒಟ್ಟು ರೂ 1.2ಕೋಟಿ ಮೌಲ್ಯದ ಹಾಲು ಸಂಗ್ರಹಿಸಿ, ಒಕ್ಕೂಟಕ್ಕೆ ರೂ 1.21 ಕೋಟಿ ಮತ್ತು ಸ್ಥಳೀಯವಾಗಿ ರೂ 12 ಲಕ್ಷ ಬೆಲೆಯ ಹಾಲನ್ನು ಮಾರಾಟ ಮಾಡಿದೆ. ಪಶು ಆಹಾರ ವ್ಯವಹಾರದಿಂದ ರೂ12.92ಲಕ್ಷ ಲಾಭ ಗಳಿಸಿದೆ. ಸದಸ್ಯರಿಗೆ ಸರ್ಕಾರದಿಂದ ರೂ 20.24 ಲಕ್ಷ ಪ್ರೋತ್ಸಾಹಧನ ಲಭಿಸಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಕೆ. ಮನೋಹರ, ವಿಸ್ತರಣಾಧಿಕಾರಿ ರಾಜಾರಾಮ ಸಂಘದ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಉಪಾಧ್ಯಕ್ಷೆ ಶ್ರೀಮತಿ ಆಚಾರ್ಯ, ನಿರ್ದೇಶಕರಾದ ಭಾಗೀರಥಿ ಅವಭೃತ್, ನಾಗಮ್ಮ ಪೂಜಾರಿ, ಶೀನ ದೇವಾಡಿಗ, ಗ್ರೇಶಿಯನ್ ಕ್ರಾಸ್ತಾ, ಸ್ಟೀವನ್ ಗೊನ್ಸಾಲ್ವೀಸ್, ಗಣೇಶ ಮಧ್ಯಸ್ಥ, ಪ್ರೇಮಾ ಪೂಜಾರಿ, ಮಂಜು ಶೆಟ್ಟಿ, ಶೇಷ ಬಳೆಗಾರ, ಸಿಬ್ಬಂದಿ ಬೇಬಿ, ಲಲಿತಾ, ಶಾರದಾ ಇದ್ದರು.

Exit mobile version