Site icon Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಉಪ್ಪುಂದ ಲಯನ್ಸ್ ಕ್ಲಬ್ ಕಾರ್ಯಕ್ಕೆ ಮೆಚ್ಚುಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಅರೆಹೊಳೆ ಕ್ರಾಸ್‌ನಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ನಾವುಂದ ಲಯನ್ಸ್ ಕ್ಲಬ್‌ಗೆ ಸನದು ಪ್ರದಾನ ಕಾರ್ಯಕ್ರಮ ನಡೆಯಿತು.

ಲಯನ್ಸ್ ಜಿಲ್ಲಾ ಗವರ್ನರ್ ನೀಲಕಂಠ ಮಂಜುನಾಥ ಹೆಗ್ಡೆ ಮಾತನಾಡಿ, ಬೈಂದೂರು ಉಪ್ಪುಂದ ಲಯನ್ಸ್ ಕ್ಲಬ್ ಅತ್ಯುತ್ತಮ ಚಟುವಟಿಕೆ ಮೂಲಕ ಜಿಲ್ಲೆಗೆ ಮಾದರಿಯಾಗಿ ರೂಪುಗೊಳ್ಳುವ ವಿಶ್ವಾಸ ಇದೆ ಎಂದು ಹೇಳಿದರು.

ನಾವುಂದ ಕ್ಲಬ್ ಅಧ್ಯಕ್ಷ ಭಾಸ್ಕರ್ ಶೆಟ್ಟಿ ವಕ್ವಾಡಿ ಅಧ್ಯಕ್ಷತೆ ವಹಿಸಿದ್ದರು. ನರಸಿಂಹ ದೇವಾಡಿಗ, ಭಾಸ್ಕರ್ ಶೆಟ್ಟಿ, ಶಶಿಧರ ಶೆಟ್ಟಿ, ಮಹಾದೇವ ಮಂಜು, ಎನ್. ಪ್ರಭಾಕರ ಶೆಟ್ಟಿ, ಸಮಥ್ ಶೆಟ್ಟಿ, ವೀರಶೇಖರ್ ಎನ್, ರಘರಾಮ ಶೆಟ್ಟಿ, ಗುರುರಾಜ ಶೇಟ್, ಮಂಜು ಶೆಟ್ಟಿ, ಬಿ. ಸುಬ್ಬಣ್ಣ ಶೆಟ್ಟಿ, ಅಶೋಕ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಕಿರಣ ಶೆಟ್ಟಿ, ವಿರೇಂದ್ರ ಹೆಗ್ಡೆ, ಕೆ. ಮನೋಹರ ಶೆಟ್ಟಿ, ರಾಘವೇಂದ್ರ ಪೂಜಾರಿ, ಕೃಷ್ಣಾನಂದ ಕಾಮತ್, ಪ್ರಸನ್ನ ಹೆಗ್ಡೆ ಬೈಂದೂರು -ಉಪ್ಪುಂದ ಕ್ಲಬ್ ಅಧ್ಯಕ್ಷ ಜಯಶೀಲ ಶೆಟ್ಟಿ ಮತ್ತಿತರರು ಇದ್ದರು.

ಯಶೋದಾ ನಾವುಂದ, ಕೇಶವ ಪೂಜಾರಿ ನಾವುಂದ ಅವರಿಗೆ ನೆರವು ವಿತರಿಸಲಾಯಿತು. ಯೋಗಪಟು ಅರೆಹೊಳೆ ನೀರಿಕ್ಷಾ ಪೂಜಾರಿ, ಲಯನ್ಸ್ ವಲಯಾಧ್ಯಕ್ಷ ವಿಶ್ವನಾಥ ಶೆಟ್ಟಿ ಅವರನ್ನು ಗೌರವಿಸಲಾಯಿತು.

Exit mobile version