ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪ್ರ ಕನ್ನಡದ ಪ್ರಥಮ ನಿಘಂಟು ಎಂದೆನಿಸಿಕೊಂಡಿರುವ ಪಂಜು ಗಂಗೊಳ್ಳಿ ಅವರು ಸಂಪಾದಿಸಿರುವ ಕುಂದಾಪ್ರ ಕನ್ನಡ ನಿಘಂಟು ಈಗ ಪ್ರಕಟಣಾಪೂರವ ಖರೀದಿಗೆ ಲಭ್ಯವಿದೆ. 700ಕ್ಕೂ ಮಿಕ್ಕಿ ಪುಟಗಳ, 10,000ಕ್ಕೂ ಮಿಕ್ಕಿ ಶಬ್ದಗಳು ಹಾಗೂ 1700ಕ್ಕೂ ಮಿಕ್ಕಿ ನುಡಿಗಟ್ಟುಗಳನ್ನು ಹೊಂದಿರುವ ಈ ನಿಘಂಟನ್ನು ಮಾರುಕಟ್ಟೆ ಬೆಲೆಗಿಂತ ರೂ. 200 ರಿಯಾಯಿತಿಯಲ್ಲಿ ಅಂಚೆ ವೆಚ್ಚ ಸಹಿತ ರೂ.400 ಪಾವತಿಸಿ ನಿಘಂಟು ಖರೀದಿಸಬಹುದಾಗಿದೆ.
ಪ್ರೊಡಿಜಿ ಪ್ರಿಂಟಿಂಗ್ ಪ್ರಕಟಿಸುತ್ತಿರುವ ಪುಸ್ತಕದ ಪ್ರಕಟಣಾಪೂರ್ವ ಮಾರಾಟವನ್ನು ಎಕ್ಸ್ಕ್ಲೂಸಿವ್ ಆಗಿ “ಬುಕ್ ಬ್ರಹ್ಮ”ತಂಡ ನಿಭಾಯಿಸಲಿದ್ದು, ಅದು ಪ್ರಕಟಣಾಪೂರ್ವ ಖರೀದಿಗೆ ಸಿಂಗಲ್ ಪಾಯಿಂಟ್ ವಿಂಡೊ ಆಗಿ ಕಾರ್ಯ ನಿರ್ವಹಿಸಲಿದೆ. ಪುಸ್ತಕ ಖರೀದಿಸಲು ಆಸಕ್ತರು ಅವರ ದೂರವಾಣಿ ಸಂಖ್ಯೆ: 8495024253 ಗೆ ಪೇಟಿಎಂ/ಗೂಗಲ್ ಪೇ/ಫೋನ್ ಪೇ ಮೂಲಕ ಪಾವತಿ ಮಾಡಿ, ಪಾವತಿ ಮಾಡಿದ ವಿವರ ಮತ್ತು ವಿಳಾಸವನ್ನು ಕಳುಹಿಸಿಕೊಟ್ಟರೆ, ಅವರು ಜನವರಿ 26ಕ್ಕೆ ಪುಸ್ತಕ ಬಿಡುಗಡೆಯ ದಿನದಂದೇ ಪುಸ್ತಕವನ್ನು ನಿಮಗೆ ತಲುಪಿಸಲು ವ್ಯವಸ್ಥೆ ಮಾಡುತ್ತಾರೆ.
ಇದನ್ನೂ ಓದಿ:
► ಪಂಜು ಗಂಗೊಳ್ಳಿ ಅವರ ‘ಕುಂದಾಪ್ರ ಕನ್ನಡ ನಿಘಂಟು’ ಹಿಗ್ಗು – ಅರಿವಿನಮಾಲೆ ಪುಸ್ತಕ ದತ್ತಿಗೆ ಆಯ್ಕೆ – https://kundapraa.com/?p=42830 .

