Site icon Kundapra.com ಕುಂದಾಪ್ರ ಡಾಟ್ ಕಾಂ

ಏಮ್ಸ್ ಪ್ರವೇಶ ಪರೀಕ್ಷೆಯಲ್ಲಿ ಬಿಜೂರಿನ ಕ್ಷಿಪ್ರ ದೇವಾಡಿಗಗೆ 139ನೇ ರ್ಯಾಂಕ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನವದೆಹಲಿಯ ಅಲ್ ಇಂಡಿಯಾ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(AIIMS) ಪ್ರವೇಶ ಪರೀಕ್ಷೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಕ್ಷಿಪ್ರಾ ದೇವಾಡಿಗ ಜನರಲ್ ಮೆರಿಟ್ ಕೆಟಗರಿಯಲ್ಲಿ INI -CET MD/MSನಲ್ಲಿ ರಾಷ್ಟ್ರಮಟ್ಟದಲ್ಲಿ 139ನೇ ರ್ಯಾಂಕ್ ಹಾಗೂ ಓಬಿಸಿ ಕೆಟಗರಿಯಲ್ಲಿ 21ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.

ಬೈಂದೂರು ತಾಲೂಕು ಬಿಜೂರು ಗ್ರಾಮದ ಮುತ್ತಯ್ಯ ದೇವಾಡಿಗ ಹಾಗೂ ಜಯಶ್ರೀ ದೇವಾಡಿಗ ದಂಪತಿಯ ಪುತ್ರಿಯಾದ ಕ್ಷಿಪ್ರ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ 2020ರಲ್ಲಿ ವೈದ್ಯಕೀಯ ಪದವಿಯನ್ನು ಮುಗಿಸಿರುತ್ತಾರೆ.

Exit mobile version