Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ಮಹಾಗಣಪತಿ ದೇವಸ್ಥಾನ ಮರುನಿರ್ಮಾಣಕ್ಕೆ ಅನುದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು : ಮರವಂತೆ ಚಿತ್ತಾರಿ ಶ್ರೀ ಮಹಾಗಣಪತಿ ದೇವಸ್ಥಾನ ಮರುರಚನೆಗೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ನೀಡಲಾದ ರೂ. 5 ಲಕ್ಷ ಅನುದಾನದ ಚೆಕ್‌ಅನ್ನು ಕ್ಷೇತ್ರದ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಅವರಿಗೆ ಹಸ್ತಾಂತರಿಸಲಾಯಿತು.

ಚೆಕ್ ಸ್ವೀಕರಿಸಿ ಮಾತನಾಡಿದ ಪ್ರಭಾಕರ ಶೆಟ್ಟಿ,300 ವರ್ಷಗಳ ಹಿಂದೆ ಸ್ಥಾಪನೆಯಾದ ಈ ದೇಗುಲ ಕಾಲಾಂತರದಲ್ಲಿ ಅವನತಿಯತ್ತ ಸಾಗಿತು. ಈಚೆಗೆ ಭಕ್ತರು ಜೀರ್ಣೋದ್ಧಾರ ಸಮಿತಿ ರಚಿಸಿಕೊಂಡು ರೂ 1ಕೋಟಿ ವೆಚ್ಚದಲ್ಲಿ ಮರುನಿರ್ಮಿಸಲು ನಿರ್ಧರಿಸಿ, ಕಾರ್ಯೋನುಖರಾದೆವು. ಧರ್ಮಸ್ಥಳದ ಕೊಡುಗೆ ನಮ್ಮ ಹೊರೆಯನ್ನು ಅಷ್ಟರ ಮಟ್ಟಿಗೆ ತಗ್ಗಿಸಿದೆ. ಅದಕ್ಕಾಗಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ನಾವು ಋಣಿ ಎಂದರು.

ರವಿ ಮಡಿವಾಳ ಸ್ವಾಗತಿಸಿ ವಂದಿಸಿದರು. ಕ್ಷೇತ್ರದ ಯೋಜನಾಧಿಕಾರಿ ಪುಷ್ಪರಾಜ, ಕ್ಷೇತ್ರದ ಗ್ರಾಮಾಭಿವೃದ್ಧಿ ಯೋಜನೆಯ ಬೈಂದೂರು ತಾಲ್ಲೂಕು ಯೋಜನಾಧಿಕಾರಿ ಶಶಿರೇಖಾ ಪಿ, ಯೋಜನೆಯ ಮೇಲ್ವಿಚಾರಕ ವೆಂಕಟೇಶ, ವಲಯಾಧ್ಯಕ್ಷೆ ವೀಣಾ, ಮರವಂತೆ ಒಕ್ಕೂಟದ ಸೇವಾ ಪ್ರತಿನಿಧಿ ಅನಿತಾ, ಮಹಾಗಣಪತಿ ದೇವಸ್ಥಾನದದ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಆನಂದ ಶೆಟ್ಟಿ, ಸದಸ್ಯ ಶಿವರಾಮ ಶೆಟ್ಟಿ, ಕಾರ್ಯದರ್ಶಿ ರಘುರಾಮ ಶೆಟ್ಟಿ, ಕೋಶಾಧಿಕಾರಿ ಜಗನ್ನಾಥ ಶೆಟ್ಟಿ, ಅರ್ಚಕ ನಾಗೇಂದ್ರ ಭಟ್, ಶ್ರೀಪಾದ ಅಡಿಗ, ಜಟ್ಟಿಗೇಶ್ವರ ಸೇವಾ ಸಂಘದ ಸದಸ್ಯರು, ಗ್ರಾಮಸ್ಥರು ಇದ್ದರು.

Exit mobile version