ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ 15 ಗ್ರಾಮ ಪಂಚಾಯತಿಗಳಿಗೆ ನಡೆದ ಚುನಾವಣೆಯಲ್ಲಿ ಶೇ.71.28ರಷ್ಟು ಮತದಾನವಾಗಿದೆ.
ತಾಲೂಕಿನ 128 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆದಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಉತ್ಸುಕತೆಯಿಂದ ಮತದಾನ ನಡೆಯುತ್ತಿರುವುದು ಕಂಡುಬಂತು. ಹಿರಿಯ ನಾಗರಿಕರು, ವಿಕಲಚೇತನರು ಹೆಚ್ಚು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದರು.
ಬೈಂದೂರು ತಾಲೂಕಿನಲ್ಲಿ ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯ ತನಕ ಶೇ.11.49 ಮತದಾನವಾಗಿದ್ದರೇ, 11 ಗಂಟೆಯ ತನಕ ಶೇ. 28.49, ಮಧ್ಯಾಹ್ನ 1 ಗಂಟೆಯ ತನಕ ಶೇ.46.53 ಹಾಗೂ 3 ಗಂಟೆಯ ಒಟ್ಟು ಶೇ.57.18 ಮತದಾನವಾಗಿದೆ. ಅಂತಿಮವಾಗಿ ಶೇ.71.28 ಮತದಾನವಾಗಿದೆ.
ಮಹಿಳೆಯರದ್ದೇ ಅಧಿಕ ಮತದಾನ:
43,374 ಪುರುಷರ ಪೈಕಿ 28507 (65.72%) ಪುರುಷರು ಮತದಾನ ಮಾಡಿದ್ದರೆ, 45284 ಮಹಿಳೆಯರ ಪೈಕಿ 34,692 (76.61) ಮಂದಿ ಮತದಾನ ಮಾಡಿದ್ದಾರೆ. ಒಟ್ಟು 63,199 (71.28) ಮತದಾನವಾಗಿದೆ.
ಮತ ಕೇಂದ್ರಗಳಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲನೆ ಮಾಡಲಾಗುತ್ತಿದ್ದು, ಮತದಾನಕ್ಕೂ ಮುನ್ನ ಸ್ಯಾನಿಟೈಜ್, ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯವಾಗಿದೆ. ಎಸ್ಪಿ, ಡಿವೈಎಸ್ಪಿ, ಸಿಪಿಐ ನೇತೃತ್ವದಲ್ಲಿ ಮತದಾನ ಕೇಂದ್ರಗಳಲ್ಲಿ ಬಂದೋವಸ್ತ್ ಏರ್ಪಡಿಸಲಾಗಿದೆ.
ಇದನ್ನೂ ಓದಿ
► ಗ್ರಾಮ ಪಂಚಾಯತ್ ಚುನಾವಣೆ: ಕುಂದಾಪುರ ತಾಲೂಕಿನಲ್ಲಿ ಶೇ.76.09 ಮತದಾನ – https://kundapraa.com/?p=43646 .