Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ತಾಲೂಕಿನ 43 ಗ್ರಾ.ಪಂ.ಗಳಿಗೆ ನಾಳೆ (ಡಿ.27) ಚುನಾವಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ 43 ಗ್ರಾ.ಪಂ.ಗಳಿಗೆ ಡಿ.27 ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು ಶನಿವಾರ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನಡೆಯಿತು.

1,262 ಅಭ್ಯರ್ಥಿಗಳು ಕಣದಲ್ಲಿ:
ಕುಂದಾಪುರ ತಾಲೂಕಿನ 43 ಗ್ರಾ.ಪಂ.ಗಳ ಒಟ್ಟು 554 ಸ್ಥಾನಗಳಿದ್ದು, ಈ ಪೈಕಿ 24 ಕಡೆಗಳಲ್ಲಿ ಅವಿರೋಧ ಆಯ್ಕೆಯಾಗಿದೆ. ಉಳಿದ 530 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಒಟ್ಟು 1,262 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

1.86 ಲಕ್ಷ ಮತದಾರರು:
1,86,685 ಮತದಾರರು ಮತ ಚಲಾಯಿಸಲಿದ್ದಾರೆ. ಇವರಲ್ಲಿ 90,339 ಪುರುಷರು, 96,343 ಮಹಿಳಾ ಮತದಾರರು ಹಾಗೂ ಮೂವರು ಇತರ ಮತದಾರರಿದ್ದಾರೆ. 43 ಚುನಾವಣಾಧಿಕಾರಿಗಳು, 43 ಸಹಾಯಕ ಚುನಾವಣಾ„ಕಾರಿಗಳು, 266 ಮತಗಟ್ಟೆಗಳಿಗೆ ತಲಾ 4ರಂತೆ ಒಟ್ಟು 1,064 ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಒಟ್ಟಾರೆ 1,150 ಅ„ಕಾರಿಗಳು ಮತಗಟ್ಟೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

266 ಮತಗಟ್ಟೆ:
ಒಟ್ಟು 271 ಮತಗಟ್ಟೆಗಳಿದ್ದು, ಆದರೆ ಹಾಲಾಡಿಯಲ್ಲಿ 2, ಮಚ್ಚಟ್ಟು 2 ಹಾಗೂ ಕೆದೂರಲ್ಲಿ 1 ಮತಗಟ್ಟೆಗಳಲ್ಲಿ ಅವಿರೋಧ ಆಯ್ಕೆ ನಡೆದಿರುವುದರಿಂದ ಅಲ್ಲಿ ಮತದಾನ ನಡೆಯುವುದಿಲ್ಲ. 204 ಮೂಲ ಮತಗಟ್ಟೆ ಹಾಗೂ 62 ಹೆಚ್ಚುವರಿ ಮತಗಟ್ಟೆ ಸೇರಿ ಒಟ್ಟು 266 ಮತಗಟ್ಟೆಗಳನ್ನು ತೆರೆಯಲಾಗಿದೆ. ಇದರಲ್ಲಿ 18 ನಕ್ಸಲ್ (20 ಮತಗಟ್ಟೆಗಳಿದ್ದರೂ ಮಚ್ಚಟ್ಟಿನಲ್ಲಿ 2 ಮತಗಟ್ಟೆಗಳಲ್ಲಿ ಚುನಾವಣೆ ಇಲ್ಲ) ಮತಗಟ್ಟೆಗಳು, 70 ಸೂಕ್ಷ್ಮ ಹಾಗೂ 178 ಸಾಮಾನ್ಯ ಮತಗಟ್ಟೆಗಳನ್ನು ಗುರುತಿಸಲಾಗಿದೆ.

ಬಂದೋಬಸ್ತ್:
ಚುನಾವಣಾ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಬಂದೋಬಸ್ತ್ಗಳನ್ನು ಕೈಗೊಳ್ಳಲಾಗಿದ್ದು, ಮತಗಟ್ಟೆಗೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬಂದಿಯನ್ನು ನಿಯೋಜಿಸಲಾಗಿದೆ. ಕುಂದಾಪುರದ ಪ್ರಭಾರ ಡಿವೈಎಸ್ಪಿ ಭರತ್ ರೆಡ್ಡಿ ನೇತೃತ್ವದಲ್ಲಿ ಕುಂದಾಪುರ, ಬೈಂದೂರು, ಬ್ರಹ್ಮಾವರ ಹಾಗೂ ಸೆನ್ ವೃತ್ತ ನಿರೀಕ್ಷಕರು, 12 ಮಂದಿ ಉಪ ನಿರೀಕ್ಷಕರು, 6 ಸಹಾಯಕ ಉಪ ನಿರೀಕ್ಷಕರು, ಮತಗಟ್ಟೆಗಳಿಗೆ 430 ಮಂದಿ ಸಿಬಂದಿ, 1 ಕೆಎಸ್ಆರ್ಪಿ ತುಕಡಿ, ಒಂದು ಜಿಲ್ಲಾ ಮೀಸಲು ಪಡೆ, 3 ಸಶಸ್ತ್ರ ಮೀಸಲು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಕಾಲೇಜಿನ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾ ಚುನಾವಣ ವೀಕ್ಷಕ ಜಿ.ಟಿ. ದಿನೇಶ್ ಕುಮಾರ್ ಹಾಗೂ ಉಡುಪಿ ಜಿಲ್ಲಾ„ಕಾರಿ ಜಿ. ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಸ್ಟರಿಂಗ್ ವೇಳೆ ಸಾಮಾಜಿಕ ಅಂತರ ಪಾಲಿಸದ ಹಾಗೂ ಮಾಸ್ಕ್ ಧರಿಸದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಕೆ. ರಾಜು ನೇತೃತ್ವದಲ್ಲಿ ಚುನಾವಣಾ ತಯಾರಿ ನಡೆಯಿತು. ತಹಶೀಲ್ದಾರ್ ಆನಂದಪ್ಪ, ಚುನಾವಣಾ„ಕಾರಿಗಳು ಉಪಸ್ಥಿತರಿದ್ದರು.

Exit mobile version