Kundapra.com ಕುಂದಾಪ್ರ ಡಾಟ್ ಕಾಂ

ಕಿರಿಮಂಜೇಶ್ವರ ಗ್ರಾ.ಪಂನಲ್ಲಿ 13 ಬಿಜೆಪಿ ಬೆಂಬಲಿಗ ಅಭ್ಯರ್ಥಿಗಳು ಆಯ್ಕೆ: ಶೇಖರ ಖಾರ್ವಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಿರಿಮಂಜೇಶ್ವರ ಗ್ರಾಮ ಪಂಚಾಯತಿಯಲ್ಲಿ 13 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ಕಿರಿಮಂಜೇಶ್ವರ ಶೇಖರ ಖಾರ್ವಿ ತಿಳಿಸಿದ್ದಾರೆ.

ಹಿಂದಿನ ಅವಧಿಯಲ್ಲಿ ನೀಡಿದ ಉತ್ತಮ ಆಡಳಿತದ ಫಲವಾಗಿ ವಿರೋಧ ಪಕ್ಷಗಳ ಅಪಪ್ರಚಾರದ ನಡುವೆಯೂ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆಮಾಡಿದ ಮತದಾರರಿಗೂ ಹಾಗೂ ಶ್ರಮಿಸಿದ ಕಾರ್ಯಕರ್ತರಿಗೂ ಧನ್ಯವಾದ ಸಲ್ಲಿಸುವುದಾಗಿ ಅವರು ತಿಳಿಸಿದರು.

ನಮ್ಮ ತಂಡದ ಎಸ್. ಪ್ರೀತಿ ಶೆಟ್ಟಿ, ರಾಜು ಎನ್ ದೇವಾಡಿಗ, ಗೀತಾ, ಕೃಷ್ಣ,  ಸುಶೀಲಾ, ಸಂತೋಷ, ವಿಶಾಲಾಕ್ಷಿ, ರಮೇಶ ಖಾರ್ವಿ, ಸರಸ್ವತಿ ನಾಯರಿ, ಜಯಲಕ್ಷ್ಮಿ ದೇವಾಡಿಗ, ಶೇಖರ ಖಾರ್ವಿ, ವಸಂತಿ ಆಯ್ಕೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ
► ಬೈಂದೂರು ತಾಲೂಕಿನ 15 ಗ್ರಾಮ ಪಂಚಾಯತಿಗಳ ವಿಜೇತರ ವಿವರ – https://kundapraa.com/?p=43731 .
► ಕುಂದಾಪುರ ತಾಲೂಕು 43 ಗ್ರಾಮ ಪಂಚಾಯತಿಯ ವಿಜೇತ ಅಭ್ಯರ್ಥಿಗಳ ವಿವರ – https://kundapraa.com/?p=43738 .

Exit mobile version