Kundapra.com ಕುಂದಾಪ್ರ ಡಾಟ್ ಕಾಂ

ನಾಡ: ಕೊರೋನಾ ವಾರಿಯರ್ಸ್‌ಗೆ ಗೌರವ ಸಮರ್ಪಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ಹಾಡಿಗರಡಿ ದೈವಸ್ಥಾನ ನಾಡ ಇಲ್ಲಿ ವಾರ್ಷಿಕ ಹಾಲು ಹಬ್ಬ, ಗೆಂಡಸೇವೆಯ ಪ್ರಯುಕ್ತ ಕೊರೋನಾ ವಾರಿಯರ್ಸ್‌ಗೆ ಗೌರವಾರ್ಪಣೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.

ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಪ್ರದೀಪ್ ಎಂ.ಚಂದನ್ ಕುಂದಬಾರಂದಡಿ, ಮುಂಬೈ ಇವರು ಉದ್ಘಾಟಿಸಿದರು. ಶ್ರೀ ಹಾಡಿಗರಡಿ ದೈವಸ್ಥಾನ ಸಮಿತಿಯ ಅಧ್ಯಕ್ಷರಾದ ನಾಗೇಶ ಪಿ.ಕಾಂಚನ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಡಾ. ಪ್ರೇಮಾನಂದ, ಡಾ.ಸುರೇಶ ಕುಮಾರ ಶೆಟ್ಟಿ ಸಹಿತ ಕೊರೋನಾ ವಾರಿಯರ್ಸ್ ಆರೋಗ್ಯ ಕಾರ್ಯಕರ್ತರನ್ನು ಗೌರವಿಸಲಾಯಿತು. ಕೊರೋನಾ ಫ್ರಂಟ್‌ಲೈನ್ ವಾರಿಯರ್ರ‍್ಸ್ ಆಗಿ ಸೇವೆ ಸಲ್ಲಿಸಿದ ರಮೇಶ ಟಿ.ಟಿ. ರಾಘವೇಂದ್ರ ನೆಂಪು ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ತಾ.ಪಂ.ಸದಸ್ಯ ಪ್ರವೀಣ್ ಶೆಟ್ಟಿ ಕಡ್ಕೆ, ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲಾಧ್ಯಕ್ಷ ಕೆ.ಎಂ.ಶಿವರಾಮ ಕೋಟ ಭಾಗವಹಿಸಿದ್ದರು. ವೈದ್ಯರಾದ ಡಾ. ಪ್ರೇಮಾನಂದ, ಡಾ.ಸುರೇಶ ಕುಮಾರ ಶೆಟ್ಟಿ, ಗ್ರಾಮ ಲೆಕ್ಕಿಗರಾದ ಸಂದೀಪ ಭಂಡಾರ್ಕಾರ್, ಅನ್ನದಾನದ ಸೇವಾಕರ್ತರಾದ ಮಾಧವ ಮೊಗವೀರ ಉಪಸ್ಥಿತರಿದ್ದರು.

ಹಾಡಿಗರಡಿ ದೈವಸ್ಥಾನ ದೈವಸ್ಥಾನ ಸಮಿತಿಯ ಕಾರ್ಯದರ್ಶಿ ಪ್ರಭಾಕರ ಎನ್,ಎಮ್ ಸ್ವಾಗತಿಸಿ, ವಿಜಯ ಪಿ.ಕಾಂಚನ್ ವಂದಿಸಿದರು. ವಿಶ್ವನಾಥ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.

Exit mobile version