Kundapra.com ಕುಂದಾಪ್ರ ಡಾಟ್ ಕಾಂ

ಯುವಕರ ಸದ್ಭಳಕೆಯಿಂದ ಸಮಾಜದಲ್ಲಿ ಬದಲಾವಣೆ : ಗೋಪಾಲ ಶೆಟ್ಟಿ

ಕೊಲ್ಲೂರು: ಯುವಕರ ಸದ್ಭಳಕೆಯಿಂದ ಸಮಾಜದಲ್ಲಿ ಮಹತ್ತರವಾದ ಬದಲಾವಣೆ ಸಾಧ್ಯ. ಉತ್ತಮ ಚಿಂತನೆ ಸಮಾಜದಲ್ಲಿ ಹರಡಿದಾಗ ಪರಿವರ್ತನೆಯ ಪರ್ವ ಆರಂಭವಾಗುತ್ತದೆ. ಅಂತಹ ಸಾಧನೆಯ ಹಾದಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಸಾಗಬೇಕು ಎಂದು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಹೇಳಿದರು.

ಅವರು ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಕೊಡ್ಲಾಡಿಯ ಶ್ರೀ ಮೂಕಾಂಬಿಕಾ ಫ್ರೌಢ ಶಾಲೆಯಲ್ಲಿ ನೂತನ ಇಂಟರ‍್ಯಾಕ್ಟ್ ಕ್ಲಬ್‌ನ್ನು ಉದ್ಘಾಟಿಸಿ ಮಾತನಾಡಿದರು.

ಇಂಟರ‍್ಯಾಕ್ಟ್ ಕ್ಲಬ್ ಕುರಿತು ಮಾಹಿತಿ ನೀಡಿದ ಖ್ಯಾತ ಉದ್ಯಮಿ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ ಸೇವೆಯ ಬದುಕು ನಮ್ಮದಾದಾಗ ಜೀವನೋತ್ಸಾಹ ಪ್ರೀತಿ ನಮ್ಮೊಳಗೆ ಮೇಳೈಸಿ ಪ್ರತಿಯೊಬ್ಬ ವಿದ್ಯಾರ್ಥಿಯು ಸಮಾಜಕ್ಕೆ ವರವಾಗಿ ಮೂಡಿಬರಲು ಸಾದ್ಯ ಆದುದರಿಂದ ಸಣ್ಣ ಸಣ್ಣ ಸೇವಾ ಚಟುವಟಿಕೆಯ ಮೂಲಕ ಜಗತ್ತಿನ ಗಮನ ಸೆಳೆಯುವತ್ತ ಇಂಟರ‍್ಯಾಕ್ಟ್ ಸದಸ್ಯರು ಕಾರ್ಯನಿರ್ವಹಿಸುವಂತಾಗಲಿ ಎಂದು ಕಥೆಗಳ ಮೂಲಕ ವಿವಿರ ನೀಡಿ ಶುಭಹಾರೈಸಿದರು.

ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರು ಇಂಟರ‍್ಯಾಕ್ಟ್ ಕ್ಲಬ್ ನೂತನ ಅಧ್ಯಕ್ಷ ಪ್ರಜ್ವಲ್, ಕಾರ್ಯದರ್ಶಿ ಸ್ವಾತಿ ಅವರಿಗೆ ಪದಪ್ರದಾನ ನೆರವೇರಿಸಿದರು.

ಆಜ್ರಿ ಗ್ರಾ. ಪಂ. ಉಪಾಧ್ಯಕ್ಷೆ ಶ್ರೀಮತಿ ಜಯಲಕ್ಷ್ಮೀ, ಇಂಟರ‍್ಯಾಕ್ಟ್ ಛೇರ್‌ಮೆನ್ ವೆಂಕಟೇಶ ಪ್ರಭು, ಶ್ರೀ ಮೂಕಾಂಬಿಕಾ ಫ್ರೌಢ ಶಾಲೆ ಮುಖ್ಯೋಪಧ್ಯಾಯ ಪ್ರಭಾಕರ ಶೆಟ್ಟಿ, ರೋಟರ‍್ಯಾಕ್ಟ್ ಕ್ಲಬ್ ಕುಂದಾಪುರ ಅಧ್ಯಕ್ಷ ರಾಘವೇಂದ್ರ ಕೆ.ಸಿ, ರೋಟರಿ ಕ್ಲಬ್ ಕುಂದಾಪುರದ ಕಾರ್ಯದರ್ಶಿ ಸಂತೋಷ ಕೋಣಿ ಉಪಸ್ಥಿತರಿದ್ದರು. ಇಂಟರ‍್ಯಾಕ್ಟ್ ಕ್ಲಬ್ ಕೋ-ಆರ್ಡಿನೇಟರ್ ಬಡಿಯ ಮಾಸ್ಟರ್ ಸ್ವಾಗತಿಸಿದರು. ತೇಜಸ್ವಿನಿ ಕಾರ್ಯಕ್ರಮ ನಿರ್ವಹಿಸಿ, ಸುಚ್ಚಿನ್ ವಂದಿಸಿದರು.

Exit mobile version