Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರದ ಮುಖ್ಯರಸ್ತೆಗೆ ಮಾಜಿ ಶಾಸಕಿ ದಿ. ವಿನ್ನಿಫ್ರೆಡ್ ಫೆರ್ನಾಂಡಿಸ್ ಹೆಸರಿಡಿ: ವಿಕಾಸ್ ಹೆಗ್ಡೆ ಆಗ್ರಹ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿಧಾನಸಭಾ ಕ್ಷೇತ್ರದ ಎರಡು ಅವಧಿಯ ಶಾಸಕರಾಗಿ, ಕುಂದಾಪುರ ಪುರಸಭೆಯಲ್ಲಿ ಸುಧೀರ್ಘ ಅವಧಿಗೆ ಪುರಸಭೆಯ ಅಧ್ಯಕ್ಷರು ಹಾಗೂ ಸದಸ್ಯರಾಗಿ ಸೇವೆ ಸಲ್ಲಿಸಿದ ದಿ. ವಿನ್ನಿಫ್ರೆಡ್ ಫೆರ್ನಾಂಡಿಸ್ ಅವರ ಹೆಸರನ್ನು ಕುಂದಾಪುರದ ಮುಖ್ಯರಸ್ತೆಗೆ ನಾಮಕರಣ ಮಾಡುವಂತೆ ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ. ವಿಕಾಸ್ ಹೆಗ್ಡೆ ಆಗ್ರಹಿಸಿದ್ದಾರೆ.

ಕುಂದಾಪುರ ಪುರಸಭೆಯ ಸರ್ವಾಂಗೀಣ ಬೆಳವಣಿಗೆಗೆ ತನ್ನದೇ ಆದ ವಿಶೇಷ ಸೇವೆ ಸಲ್ಲಿಸಿದ ಮಾಜಿ ಶಾಸಕಿ ದಿ. ವಿನ್ನಿಫ್ರೆಡ್ ಫೆರ್ನಾಂಡಿಸ್ ಅವರ ಹೆಸರು ಜನಮಾನಸದಲ್ಲಿ ಉಳಿಯುವಂತೆ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಿದ್ದಾರೆ.

Exit mobile version