Kundapra.com ಕುಂದಾಪ್ರ ಡಾಟ್ ಕಾಂ

ಪದವಿ ಪತ್ರಿಕೋದ್ಯಮ ವಿಭಾಗದಿಂದ ಆಳ್ವಾಸ್ ಮುದಮ್ – ಪಾಡ್‌ಕಾಸ್ಟ್‌ನ ಬಿಡುಗಡೆ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದರೆ: ಆಳ್ವಾಸ್ ಕಾಲೇಜಿನ ಪದವಿ ಪತ್ರಿಕೋದ್ಯಮ ವಿಭಾಗದಿಂದ ನಡೆದ ಆಳ್ವಾಸ್ ಮುದಮ್-ಪಾಡ್‌ಕಾಸ್ಟ್‌ನ ಮೊದಲ ಸಂಚಿಕೆ ಬಿಡುಗಡೆಯ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿ ಮಾತನಾಡಿದ ಆಳ್ವಾಸ್ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಕೊಳ್ಳಬೇಕು. ಅದೇ ನಮ್ಮನ್ನು ಉತ್ತಮ ಬರಹಗಾರರಾಗಿ, ಸಂವಹನಕಾರರಾಗಿ ರೂಪುಗೊಳಿಸಬಲ್ಲದು. ಕಲಿಕೆ ಎಂಬುದು ನಿರಂತರ ಪಕ್ರಿಯೆ ಹೊಸ ಹೊಸ ಪ್ರಯತ್ನಗಳ ಮೂಲಕ ವಿಷಯಗಳನ್ನು ಕಲಿಯುತ್ತಿರಬೇಕು. ವಿದ್ಯಾರ್ಥಿಗಳು ಓದಿನ ಜೊತೆಗೆ ವಿಭಾಗದ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಬೆಳವಣಿಗೆ ಸಾಧ್ಯವಾಗುತ್ತದೆ. ಕಾಲೇಜಿನ ಪತ್ರಿಕೋದ್ಯಮ ವಿಭಾಗವು ವಿದ್ಯಾರ್ಥಿಗಳಿಗೆ ಪೂರಕವಾದ ಶಿಕ್ಷಣವನ್ನು ನೀಡುತ್ತಿದ್ದು, ಪ್ರತಿಯೊಬ್ಬ ವಿದ್ಯಾರ್ಥಿ ನೂತನ ಪ್ರಯೋಗಗಳಲ್ಲಿ ತೊಡಗಿಸಿಕೊಂಡು, ಸದುಪಯೋಗವನ್ನು ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ ಅದಕ್ಕಾಗಿ ವಿದ್ಯಾರ್ಥಿಗಳು ಈಗಲೇ ತಯಾರಾಗಿರಬೇಕು. ಕಾಲೇಜುಗಳಲ್ಲಿ ಕಲಿತ ಪ್ರಾಯೋಗಿಕ ಪಾಠಗಳು ಮುಂದೆ ವೃತ್ತಿಕ್ಷೇತ್ರಕ್ಕೆ ಸುಲಭವಾದ ದಾರಿಯನ್ನು ಮಾಡಿಕೊಡುತ್ತದೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮನ್ನು ತಾವು ಪ್ರತಿಯೊಂದು ಕೆಲಸಗಳಲ್ಲೂ ಶ್ರದ್ಧೆಯಿಂದ ತೊಡಗಿಸಿಕೊಳ್ಳಬೇಕು ಎಂದು ಹೇಳಿ, ವಿದ್ಯಾರ್ಥಿಗಳ ನೂತನ ಪ್ರಯತ್ನಕ್ಕೆ ಶುಭ ಹಾರೈಸಿದರು. ಆಳ್ವಾಸ್ ಮುದಮ್- ಪಾಡ್‌ಕಾಸ್ಟ್ ಪದವಿ ಪತ್ರಿಕೋದ್ಯಮ ವಿಭಾಗದ ನೂತನ ಪ್ರಯತ್ನವಾಗಿದ್ದು, ವಿಭಾಗದ ಅಫಿಶಿಯಲ್ ಸಾಮಾಜಿಕ ಜಾಲತಾಣದ ಪೇಜ್‌ಗಳಲ್ಲಿ ಲಭ್ಯವಿರಲಿದೆ.

ಈ ಸಂದರ್ಭದಲ್ಲಿ ಪದವಿ ಪತ್ರಿಕೋದ್ಯಮ ವಿದ್ಯಾರ್ಥಿಗಳೇ ಹೊರತರುತ್ತಿರು, ಆಳ್ವಾಸ್ ಮಾಧ್ಯಮ, ಆಳ್ವಾಸ್ ಮಿರರ್, ಆಳ್ವಾಸ್ ವಿಶನ್ ಪ್ರಾಯೋಗಿಕ ಪತ್ರಿಕೆ ಹಾಗೂ ಸುದ್ದಿಮನೆ ಭಿತ್ತಿ ಬರಹದ ವಿಶೇಷ ಸಂಚಿಕೆಗಳನ್ನು ಹೊರತರಲಾಯಿತು.

ಈ ಸಂದರ್ಭದಲ್ಲಿ ಪದವಿ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆರೇಷ್ಮಾ ಉದಯ್ ಕುಮಾರ್, ಮಾನವಿಕ ವಿಭಾಗದ ಡೀನ್ ಪ್ರೊ. ಸಂಧ್ಯಾ ಕೆ.ಎಸ್ , ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಸಂಚಾಲಕ ಪ್ರಸಾದ್ ಶೆಟ್ಟಿ, ಉಪನ್ಯಾಸಕಿ ರಕ್ಷಿತಾ ತೋಡಾರು, ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಮರಿಯಮ್ ಹಾಗೂ ಫಾತಿಮ ಮುಸ್ಕಾನ್ ಕಾರ್ಯಕ್ರಮ ನಿರೂಪಿಸಿದರು.

Exit mobile version