Kundapra.com ಕುಂದಾಪ್ರ ಡಾಟ್ ಕಾಂ

ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್‌ಸಿಸಿ ಆರ್ಮಿ ವಿಂಗ್ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್‌ಸಿಸಿ ಆರ್ಮಿ ವಿಂಗ್‌ನ ಉದ್ಘಾಟನೆ ನಡೆಯಿತು.

ಉದ್ಘಾಟಿಸಿ ಮಾತನಾಡಿದ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ. ಎಮ್. ಸುಕುಮಾರ ಶೆಟ್ಟಿ, ವಿದ್ಯಾರ್ಥಿ ಸಮುದಾಯದಲ್ಲಿ ಶಿಸ್ತು ಕೇಂದ್ರಿತ ನಾಗರಿಕ ಪ್ರಜ್ಞೆಯನ್ನು ಪಡಿಮೂಡಿಸಿ ತನ್ಮೂಲಕ ಏಕತೆಯ ಭಾರತವನ್ನು ಕಟ್ಟುವಲ್ಲಿ ಎನ್.ಸಿ.ಸಿ. ನಿರ್ಣಾಯಕ ಪಾತ್ರ ವಹಿಸಿದ್ದು, ಕಾಲೇಜಿಗೆ ಎನ್‌ಸಿಸಿ ಆರ್ಮಿ ವಿಂಗ್‌ನ ಪ್ರವೇಶ ನಮ್ಮ ಶಿಸ್ತು ಕೇಂದ್ರಿತ ಶಿಕ್ಷಣದ ಪರಿಕಲ್ಪನೆಯನ್ನು ಪುಷ್ಠೀಕರಿಸಿದೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು ಈ ಸಂದರ್ಭ ಭಾರತೀಯ ಗಡಿ ಭದ್ರತಾ ಪಡೆಯ ನಿವೃತ್ತ ಯೋಧ ಗಣಪತಿ ಖಾರ್ವಿ ಬಸ್ರೂರು ಮತ್ತು ಉಡುಪಿ ಜಿಲ್ಲಾ ಅತ್ಯುತ್ತಮ ರೆಡ್‌ಕ್ರಾಸ್ ಅಧಿಕಾರಿ ಗೌರವಕ್ಕೆ ಪಾತ್ರರಾದ ವಾಣಿಜ್ಯ ಉಪನ್ಯಾಸಕರಾದ ಶಿವರಾಜ್ ಸಿ. ನಾವುಂದ ಇವರನ್ನು ಸನ್ಮಾನಿಸಲಾಯಿತು.

ಕಾಲೇಜಿನ ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಹುಂತ್ರಿ ಕೆ ಸುಧಾಕರ್ ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಕೃತ ಉಪನ್ಯಾಸಕಿ ಸುದಕ್ಷಿಣಾ ಎ.ಎಸ್. ಪ್ರಾರ್ಥಿಸಿ, ಉಪ ಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿದರು. ಎನ್.ಸಿ.ಸಿ. ಅಧಿಕಾರಿ ಶಿವರಾಜ್ ಸಿ. ನಾವುಂದ ಸ್ವಾಗತಿಸಿದರು. ಗಣಿತಶಾಸ್ತ್ರ ಉಪನ್ಯಾಸಕಿಯಾದ ಗೌರಿ ಶೆಟ್ಟಿ ವಂದಿಸಿದರು. ಇಂಗ್ಲೀಷ್ ಉಪನ್ಯಾಸಕಿ ಅಮೃತಾ ನಿರೂಪಿಸಿದರು.

Exit mobile version