Kundapra.com ಕುಂದಾಪ್ರ ಡಾಟ್ ಕಾಂ

ಮರವಂತೆ ಕಡಲ ತೀರದಲ್ಲಿ ಸ್ವಚ್ಛತೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮರವಂತೆ ಇಲ್ಲಿನ ಜಟ್ಟಿಗೇಶ್ವರ ಗ್ರೂಪ್, ಸ್ನೇಹಾ ಮಹಿಳಾ ಮಂಡಲ, ಸಂಗಮ ಯುವಕ ಮಂಡಲ, ಆಸರೆ ಟ್ರಸ್ಟ್, ಮರವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ 72ನೇ ಗಣರಾಜ್ಯೋತ್ಸವವನ್ನು ಮರವಂತೆಯ ಕಡಲತೀರದಲ್ಲಿ ಸ್ವಚ್ಛತೋತ್ಸವವಾಗಿ ಆಚರಿಸಲಾಯಿತು.

ಎಲ್ಲ ದಿನಗಳಲ್ಲಿ ಪ್ರವಾಸಿಗಳು ಹೆಚ್ಚು ಸಂಖ್ಯೆಯಲ್ಲಿ ವಿಹರಿಸುವ ಮಾರಸ್ವಾಮಿ ಕಡಲತೀರದಲ್ಲಿ ಹೆಚ್ಚು ತ್ಯಾಜ್ಯ ಸಂಗ್ರಹವಾಗುತ್ತಿರುವುದರಿಂದ ಸಂಘಟನೆಗಳ ಸ್ವಯಂಸೇವಕರು ಈ ಸ್ಥಳವನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಹರಡಿಕೊಂಡಿದ್ದ ಬಾಟಲಿ, ಪ್ಲಾಸ್ಟಿಕ್ ಚೀಲ ಮತ್ತಿತರ ತ್ಯಾಜ್ಯವನ್ನು ಒಟ್ಟುಗೂಡಿಸಿದರು. ಆ ಬಳಿಕ ಅದನ್ನು ಗ್ರಾಮ ಪಂಚಾಯಿತಿಯ ಸ್ವಚ್ಛ ವಾಹಿನಿ ವಾಹನದಲ್ಲಿ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣಾ ಕೇಂದ್ರಕ್ಕೆ ಸಾಗಿಸಲಾಯಿತು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿ ಮಡಿವಾಳ, ಮಾಜಿ ಅಧ್ಯಕ್ಷ ದಯಾನಂದ ಬಳೆಗಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕರುಣಾಕರ ಆಚಾರ್ಯ, ಸಂಗಮ ಯುವಕ ಮಂಡಲದ ಅಧ್ಯಕ್ಷ ನಾಗರಾಜ ಪಟ್ಕಾರ್, ಸ್ನೇಹಾ ಮಹಿಳಾ ಮಂಡಲದ ಅಧ್ಯಕ್ಷೆ ಅನಿತಾ ಆರ್. ಕೆ, ಶೋಭಾ ದೇವಾಡಿಗ, ಆಸರೆ ಟ್ರಸ್ಟ್‌ನ ಪದಾಧಿಕಾರಿಗಳಾದ ರಾಜೇಶ ಆಚಾರ್ಯ, ಸಂತೋಷ ಮೊಗವೀರ, ಮಂಜುನಾಥ ಮಧ್ಯಸ್ಥ, ದೇವಿದಾಸ ಶ್ಯಾನುಭಾಗ್, ಎಸ್‌ಎಲ್‌ಆರ್‌ಎಂ ಘಟಕದ ಉಸ್ತುವಾರಿ ಸುನಿತಾ ಮರವಂತೆಯ ಸ್ವಯಂಸೇವಾ ಸಂಘಟನೆಗಳ ಸದಸ್ಯರು ಸೇರಿದಂತೆ ಐವತ್ತು ಮಂದಿ ಅಭಿಯಾನದಲ್ಲಿ ಇದ್ದರು.

Exit mobile version