Kundapra.com ಕುಂದಾಪ್ರ ಡಾಟ್ ಕಾಂ

ಮಕ್ಕಳ ಮತ್ತು ಮಹಿಳಾ ಗ್ರಾಮಸಭೆ: ಸಾಧಕ ಮಕ್ಕಳಿಗೆ ಪುರಸ್ಕಾರ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮರವಂತೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ಮಕ್ಕಳ ಮತ್ತು ಮಹಿಳಾ ಗ್ರಾಮಸಭೆಯಲ್ಲಿ ಜಿ. ಎಂ. ಮುಂದಿನಮನಿ ಸಾಧಕ ಮಕ್ಕಳಿಗೆ ಪುರಸ್ಕಾರ ವಿತರಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸವಿತಾ ಶೆಟ್ಟಿ ಮಾತನಾಡಿ, ಮಕ್ಕಳಿಗೆ ಜೀವಿಸುವ, ಶಿಕ್ಷಣ ಮತ್ತು ರಕ್ಷಣೆ ಪಡೆಯುವ, ಭಾಗವಹಿಸುವ ಹಕ್ಕುಗಳಿವೆ. ಇವುಗಳಿಗೆ ಅಡ್ಡಿಯಾದಾಗ ಮಕ್ಕಳು ಪೋಷಕರ, ಶಿಕ್ಷಕರ ಅಥವಾ ಅಧಿಕಾರಿಗಳ ಗಮನಕ್ಕೆ ತಂದು ಅವುಗಳನ್ನು ಪಡೆದುಕೊಳ್ಳಬೇಕು. ಹಾಗೆಯೇ ಮಹಿಳೆಯರೂ ತಮ್ಮ ಶೋಷಣೆಯ ವಿರುದ್ಧ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ಜನಾರ್ದನ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಕೆ. ವಿಘ್ನೇಶ್ವರ, ಮಕ್ಕಳ ಮಿತ್ರೆ ಅನಿತಾ ಆರ್. ಕೆ, ಮಹಿಳಾ ಮಿತ್ರೆ ಲೋಲಾಕ್ಷಿ, ಶಾಲಾಭಿವೃದ್ಧಿ ಸಮಿತಿಗಳ ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷ ಅಬ್ದುಲ್ಲಾ, ಅಭಿವೃದ್ಧಿ ಅಧಿಕಾರಿ ರಿಯಾಜ್ ಅಹಮದ್, ಸಂಪನ್ಮೂಲ ವ್ಯಕ್ತಿ ತಿಲೋತ್ತಮಾ, ಪಂಚಾಯಿತಿ ಸಿಬ್ಬಂದಿ ಶೇಖರ ಮರವಂತೆ ಇದ್ದರು. ಸಾಧಕ ಮಕ್ಕಳಿಗೆ ಪುರಸ್ಕಾರ ವಿತರಣೆ ನಡೆಯಿತು.

ವಿದ್ಯಾರ್ಥಿನಿ ಮೇಘನಾ ಅಧ್ಯಕ್ಷತೆ ವಹಿಸಿದ್ದರು. ಆಶ್ರಿತಾ ಸ್ವಾಗತಿಸಿದರು. ಪಂಚಾಯಿತಿ ಸಿಬ್ಬಂದಿ ಗುರುರಾಜ್ ಹಿಂದಿನ ಮಕ್ಕಳ ಗ್ರಾಮಸಭೆಯ ವರದಿ ಮಂಡಿಸಿದರು. ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಎಂ. ಮುಂದಿನಮನಿ ಮಕ್ಕಳೊಂದಿಗೆ ಸಂವಾದ ನಡೆಸಿ ಆಶ್ರಿತಾ, ಅಂಕಿತಾ, ಮೇಘನಾ, ಧನ್ಯತ್, ಸಾಕ್ಷಿತಾ, ಯಶಸ್ವಿನಿ, ಸಂಜನಾ ಮುಂದಿಟ್ಟ ಸಮಸ್ಯೆಗಳಿಗೆ ಅಧಿಕಾರಿಗಳಿಂದ ಉತ್ತರ ಕೊಡಿಸಿದರು. ಪ್ರಾಣೇಶ್ ವಂದಿಸಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸತ್ಯನಾ ಕೊಡೇರಿ ನಿರೂಪಿಸಿದರು.

Exit mobile version