Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್‌ನಲ್ಲಿ ಮನೋವಿಜ್ಞಾನ ವಿಭಾಗದಿಂದ ಕಾರ್ಯಗಾರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಮನೋವಿಜ್ಞಾನ ವಿಭಾಗದ ವತಿಯಿಂದ ‘ಪರ್ಸನಲ್ ಎಫೆಕ್ಟಿವ್‌ನೆಸ್’ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಗಾರ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜೈನ್ ವಿಶ್ವವಿದ್ಯಾನಿಲಯದ ಮಾನವಿಕ ವಿಭಾಗದ ನಿವೃತ್ತ ಮುಖ್ಯಸ್ಥೆ ಡಾ. ಶೈಲಜಾ ಶಾಸ್ತ್ರೀ ಮಾತನಾಡಿ, ನಾವು ಇನ್ನೊಬ್ಬರ ಮಾತಿಗೆ ಅವಲಂಬಿತರಾಗದೆ, ಸ್ವ ಆಲೋಚನೆಯಿಂದ ಕೆಲಸ ಮಾಡಿದಾಗ ಮಾತ್ರ ಸ್ವಾವಲಂಬಿಯಾಗಿ ಬೆಳೆಯಲು ಸಾಧ್ಯ ಎಂದರು. ಸ್ಟಾಂಡಿಂಗ್ ಟವರ್, ಮಾಸ್ಕ್ ಮೇಕಿಂಗ್, ಫ್ರೇಮಿಂಗ್ ಸ್ಕ್ವಾರ್, ಲಾಫರ್ ತೆರಪಿ ಎಂಬ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ‘ಪರ್ಸನಲ್ ಎಫೆಕ್ಟಿವ್‌ನೆಸ್’ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ನಾವು ಒಂದು ವಿಷಯದ ಬಗ್ಗೆ ಆಳವಾದ ಯೋಚನೆ, ಭರವಸೆ, ವಿಶ್ವಾಸವನ್ನು ಹೊಂದಿರಬೇಕು. ಮಾತ್ರವಲ್ಲದೇ ಒಳ್ಳೆಯ ಆಲೋಚನೆಗಳನ್ನು ಬೆಳೆಸಿಕೊಂಡು ಆ ಆಲೋಚನೆಗಳನ್ನು ಇನ್ನೊಬ್ಬರಿಗೆ ಹಂಚಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಆಡ್ರಿ ಪಿಂಟೊ, ಉಪನ್ಯಾಸಕರಾದ ಮೇಘಾ ಮನೋಜ್, ಸಾರ್ಥಕ್ ಕುಮಾರ್ ಸಿಂಗ್, ರಶ್ಮೀ ಶೆಟ್ಟಿ ಉಪಸ್ಥಿತರಿದ್ದರು. ಜೆಸ್ಲಾ ಬಾನು ಕಾರ್ಯಕ್ರಮ ನಿರೂಪಿಸಿ, ಸಜಿಲಾ ಸಲೀಮ್ ವಂದಿಸಿದರು.

Exit mobile version