Site icon Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು: ಕೆನರಾ ಬ್ಯಾಂಕ್ ಹೈಮಾಸ್ಟ್ ದೀಪ ಕೊಡುಗೆ

ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ವಾಹನ ನಿಲುಗಡೆ ಪ್ರದೇಶದಲ್ಲಿ ಕೆನರಾ ಬ್ಯಾಂಕ್ ಕೊಡುಗೆಯಾಗಿ ನೀಡಿದ ಮೂರುವರೆ ಲಕ್ಷ ರೂ. ವೆಚ್ಚದ ಹೈ-ಮಾಸ್ಟ್ ವಿದ್ಯುತ್ ದೀಪಸ್ಥಂಭವನ್ನು ಸೋಮವಾರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ ಲೋಕಾರ್ಪಣೆಗೊಳಿಸಿದರು.

ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಕಛೇರಿಯ ಉಪ ಮಹಾಪ್ರಬಂಧಕ ಜಿ.ವಿ.ಪ್ರಭು, ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ಅಧೀಕ್ಷಕ ಕೆ. ರಾಮಕೃಷ್ಣ ಅಡಿಗ, ನೇರಳಕಟ್ಟೆ ಕೆನರಾ ಬ್ಯಾಂಕ್ ಶಾಖೆಯ ಪ್ರಬಂಧಕ ಸತೀಶ್ ಬೀಡು, ಅಧಿಕಾರಿ ಗಿರೀಶ್ ಭಂಡಾರಿ, ಸಿಬ್ಬಂದಿ ಈಶ್ವರ್ ಹಾಗೂ ದೇವಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Exit mobile version