Site icon Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಕುಣಿತ ಭಜನೆ ಪ್ರಾರಂಭೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಭಜನೆಯಿಂದ ದೇವರ ಪ್ರೀತಿಗಳಿಸಲು ಸಾಧ್ಯವಿದೆ. ಭಜನೆ ಮೂಲಕ ಭಕ್ತಿ ಶ್ರದ್ಧೆಗೆ ಪ್ರಾಮಾಣಿಕತೆಗೆ ದೇವರು ಒಲಿಯುತ್ತಾನೆ. ಚಿಕ್ಕಂದಿನಿಂದಲೇ ಮಕ್ಕಳಿಗೆ ಧಾರ್ಮಿಕ ಭಾವನೆಗಳನ್ನು ಮೂಡಿಸುವ ಪ್ರಯತ್ನ ಹಿರಿಯರಿಂದ ನಡೆಯಬೇಕು. ಧಾರ್ಮಿಕ ಚಿಂತನೆಗಳಿಂದ ಮನುಷ್ಯ ಸತ್ಪ್ರಜೆಯಾಗಿ ಬೆಳೆಯುತ್ತಾನೆ ಎಂದು ನೇತ್ರಾವತಿ ಶಿರೂರು ಹೇಳಿದರು.

ಅವರು ಇಂದುಶ್ರೀ ಮಹಿಳಾ ಸಂಘ ಗಂಗೊಳ್ಳಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಬಾಲಕ-ಬಾಲಕಿಯರ ಕುಣಿತ ಭಜನೆ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಗೌರಿ ಜಿ.ಬಿ., ಕುಸುಮ ಜಿ.ಟಿ., ಶಕುಂತಲಾ ಜಿ.ಟಿ., ಕಸ್ತೂರಿ, ಸುಗಂಧಿ ಜಿ.ಎನ್., ಜಯಂತಿ, ವಸಂತಿ ಜಿ.ಎನ್., ಸುಮಿತ್ರಾ ಜಿ., ರುದ್ರಮ್ಮ, ಸರೋಜ, ಗೌರಿ ಬಿ. ಮತ್ತಿತರರು ಉಪಸ್ಥಿತರಿದ್ದರು. ಅಧ್ಯಕ್ಷೆ ಸುಶೀಲಾ ಸ್ವಾಗತಿಸಿದರು. ವಸಂತಿ ಪಿ. ಕಾರ್ಯಕ್ರಮ ನಿರ್ವಹಿಸಿದರು. ನಾಗಿಣಿ ವಂದಿಸಿದರು.

Exit mobile version