Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಹೋಲಿಕ್ರಾಸ್ ಚರ್ಚ್‌ನಲ್ಲಿ ತೆರಾಲಿ ಹಬ್ಬ ಆಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಹೋಲಿಕ್ರಾಸ್ ಚರ್ಚ್‌ನಲ್ಲಿ ವಾರ್ಷಿಕ ಹಬ್ಬ ತೆರಾಲಿ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು.

ಮುಖ್ಯ ಧರ್ಮಗುರುಗಳಾಗಿ ಮಾತನಾಡಿದ ಪಾಂಗಾಳ ಚರ್ಚಿನ ಸಹಾಯಕ ಧರ್ಮಗುರು ರೆ. ಫಾ ರೋಶನ್ ಡಿ ಕುನ್ನಾ, ಈ ಸಮಾಜದಲ್ಲಿ ನಾವೆಲ್ಲರೂ ಸಹೋದರ ಸಹೋದರಿಯರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕುಂದಾಪುರ ವಲಯ ಧರ್ಮಗುರು ರೆ. ಫಾ. ಸ್ಟ್ಯಾನಿ ತ್ರಾವ್ರೂ, ಗಂಗೊಳ್ಳಿಯ ರೆ. ಫಾ. ಆಲ್ಪರ್ಟ್ ಕ್ರಾಸ್ತಾ, ರೆ. ಫಾ ಚಾರ್ಲ್ಸ್ ನೊರೆನ್ಹೆ, ಮುಂತಾದವರು ಉಪಸ್ಥಿತರಿದ್ದರು. ಬೈಂದೂರು ಚರ್ಚಿನ ಧರ್ಮಗುರು ರೆ. ಫಾ ವಿನ್ಸೆಂಟ್ ವಂದಿಸಿದರು.

 

Exit mobile version