ಕುಂದಾಪುರ: ತಾಲೂಕಿನ ವಕ್ವಾಡಿ ಗ್ರಾಮದ ಗೊಳಿಕಟ್ಟೆ ನಿವಾಸಿ ಗೋವಿಂದ ಪೂಜಾರಿ ಹಾಗೂ ದೇವಕಿ ದಂಪತಿಗಳ ಮಗ ಚಂದ್ರ ಪೂಜಾರಿ ಎಂಬುವರು ಮೇದೋಜಿರಕ ಗೃಂಥಿಯ ಊತ ಹಾಗೂ ಮೂತ್ರಪಿಂಡಗಳ ವೈಫಲ್ಯದಿಂದ ಬಳಲುತ್ತಿದ್ದು, ಡಯಾಲಿಸಿಸ್ ಸೇರಿದಂತೆ ತುರ್ತುಚಿಕಿತ್ಸೆಯ ಅಗತ್ಯವಿದೆ.
ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿರುವ ಇವರ ಚಿಕಿತ್ಸೆಗೆ ಸುಮಾರು 1.5 ಲಕ್ಷ ರೂಪಾಯಿ ಬೇಕಾಗಿದ್ದು, ಆರ್ಥಿಕವಾಗಿ ಕಡುಬಡವರಾದ ಇವರು ದಾನಿಗಳ ನೆರವಿಗಾಗಿ ಮೊರೆಯಿಡುತ್ತಿದ್ದಾರೆ. ಇವರಿಗೆ ಸಹಾಯ ಮಾಡಲಿಚ್ಚಿಸುವ ದಾನಿಗಳು ಸಿಂಡಿಕೇಟ್ ಬ್ಯಾಂಕ್ ಕೋಟೇಶ್ವರ ಶಾಖೆಯ ಖಾತೆ ಸಂಖ್ಯೆ 01492210039370 ಕ್ಕೆ ಹಣ ಪಾವತಿಸಿ ಇವರ ಚಿಕಿತ್ಸೆಗೆ ನೆರವಾಗಬಹುದು.