ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನಿಮಾನ್ಸ್ ಬೆಂಗಳೂರು ಸಹಯೋಗದೊಂದಿಗೆ ಅನುಷ್ಠಾನಗೊಂಡಿರುವ ಯುವಸ್ಪಂದನ ಕಾರ್ಯಕ್ರಮದಡಿಯಲ್ಲಿ ನಡೆದ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳಲ್ಲಿ ಉಡುಪಿ ಜಿಲ್ಲಾ ತಂಡ ವಿವಿಧ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ವೈಯಕ್ತಿಕ ವಿಭಾಗದಲ್ಲಿ ಅತ್ಯುತ್ತಮ ಲೇಖನ – ಯುವ ಸ್ಪಂದನ ಶ್ಯಾಮಲಾ ಕಿರಣ್ ಪ್ರಥಮ, ಅತ್ಯುತ್ತಮ ಲೇಖನ ಚಟುವಟಿಕೆ ಜ್ಯೋತಿ ಪ್ರಶಾಂತ್ ಪ್ರಥಮ ಹಾಗೂ ಗುಂಪು ಚಟುವಟಿಕೆಯಲ್ಲಿ ಯುವಸ್ಪಂದನ ವಿಡಿಯೋ ಪ್ರಥಮ, ಭಿತ್ತಿಪತ್ರ ರಚನೆಯಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿರುತ್ತದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಂಗಳೂರು ಇಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಕೆ. ಸಿ ನಾರಾಯಣ ಗೌಡ ಪ್ರಶಸ್ತಿ ಪ್ರಧಾನ ನೆರವೇರಿಸಿದರು.
ಈ ಸಂದರ್ಭದಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಕೆ ಶ್ರೀನಿವಾಸ್, ಬೆಂಗಳೂರು ನಿಮಾನ್ಸ್ ನಿರ್ದೇಶಕ ಡಾ. ಗುರುರಾಜ್, ಬೆಂಗಳೂರು ನಿಮಾನ್ಸ್ ಹೆಚ್ಚುವರಿ ಪ್ರಾಧ್ಯಾಪಕ ಡಾ. ಪ್ರದೀಪ್ ಬಾನಂದೂರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಷನ್ ಶೆಟ್ಟಿ ಭಾಗವಹಿಸಿ, ತಂಡದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.