Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ರಕ್ತದಾನ, ಉಚಿತ ಮೂಳೆ ಹಾಗೂ ನರರೋಗ ತಪಾಸಣೆ ಶಿಬಿರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೇಶದಾದ್ಯಂತ ಕೋವಿಡ್ ಸಂಕಷ್ಟದ ದಿನಗಳು ಇದ್ದಾಗಲೂ ನಾವು ಎಚ್ಚರಿಕೆಯಿಂದ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ, ದಾನಿಗಳಿಂದ ರಕ್ತವನ್ನು ಸಂಗ್ರಹಿಸಿ ಅನೇಕ ಪ್ರಾಣಗಳನ್ನು ರಕ್ಷಿಸುವ ಕಾರ್ಯ ಮಾಡಿದ್ದೇವೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕದ ಸಭಾಪತಿ ಎಸ್.ಜಯಕರ ಶೆಟ್ಟಿ ಹೇಳಿದರು.

ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿ, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಹಾಗೂ ಆಯುಷ್ ಧಾಮ ಆರ್ಥೊ ನ್ಯೂರೋ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ನಡೆದ ರಕ್ತದಾನ, ಉಚಿತ ಮೂಳೆ ಹಾಗೂ ನರರೋಗ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಶೀರ್ವಚನ ನೀಡಿದ ವಲಯ ಧರ್ಮಗುರುಗಳಾದ ಸ್ಟ್ಯಾನಿ ತಾವ್ರೊ ಅವರು, ದಾನಗಳಲ್ಲಿಯೇ ಅತ್ಯಂತ ಶ್ರೇಷ್ಠ ದಾನವಾಗಿರುವ ರಕ್ತದಾನದಿಂದ ಅನೇಕ ಜೀವಗಳನ್ನು ಕಾಪಾಡಲು ಸಾಧ್ಯ ಎಂದರು.

ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ಅಧ್ಯಕ್ಷೆ ಮೇಬಲ್ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ದಕ್ಷಿಣ ಅಧ್ಯಕ್ಷ ಡಾ.ಉತ್ತಮ್ ಕುಮಾರ್ ಶೆಟ್ಟಿ, ಆಯುಷ್ ಧಾಮ ಆರ್ಥೊ ನ್ಯೂರೋ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ವಿನಯ ಚಂದ್ರ ಶೆಟ್ಟಿ, ಕುಂದಾಪುರ ಇಗರ್ಜಿಯ ಧರ್ಮಗುರುಗಳಾದ ವಿಜಯ್ ಡಿಸೋಜಾ, ಪ್ರವೀಣ್ ಮಾರ್ಟಿಸ್, ಕುಂದಾಪುರ ವಲಯ ಸಮಿತಿಯ ನಿಯೋಜಿತೆ ಅಧ್ಯಕ್ಷೆ ಶಾಂತಿ ಪಿರೇರಾ, ಮಾಜಿ ಅಧ್ಯಕ್ಷ ಎರಿಕ್ ಗೊನ್ಸಾಲ್ವಿಸ್, ಕಥೊಲಿಕ್ ಸಭಾ ಮುಖಂಡರಾದ ವಿನೋದ್ ಕ್ರಾಸ್ಟೊ, ವಿಲ್ಸನ್ ಡಿಆಲ್ಮೇಡಾ, ಕಿರಣ್ ಕ್ರಾಸ್ತಾ, ಶೈಲಾ ಡಿ ಆಲ್ಮೇಡಾ, ಪ್ರೆಸಿಲ್ಲಾ ಮಿನೆಜೆಸ್, ವಿನಯಾ ಡಿಕೋಸ್ತಾ, ಜೂಲಿಯೆಟ್ ಪಾಯ್ಸ್, ನಿರ್ಮಲಾ ಡಿಸೋಜಾ ಮೈಕಲ್ ಗೊನ್ಸಾಲ್ವಿಸ್, ರೋಟರಿ ಕ್ಲಬಿನ ಜೂಡಿತ್ ಮೆಂಡೊನ್ಸಾ, ಜೊನ್ಸನ್ ಡಿ ಆಲ್ಮೇಡಾ, ಪ್ರಕಾಶ್ ಲೋಬೊ, ರೆಡ್ಕ್ರಾಸ್ ನ ಡಾ.ಸೋನಿ ಡಿಕೋಸ್ತಾ, ಶಿವರಾಮ್ ಶೆಟ್ಟಿ, ಗಣೇಶ ಆಚಾರ್ಯ, ಸೀತಾರಾಮ್ ಶೆಟ್ಟಿ, ಸತ್ಯನಾರಾಯಣ ಪುರಾಣಿಕ್ ಇದ್ದರು.

ಕುಂದಾಪುರ ಚರ್ಚಿನ ಆರೋಗ್ಯ ಆಯೋಗ, ಐಸಿವೈಎಂ, ಸ್ತ್ರೀ ಸಂಘಟನೆ ಹಾಗೂ ಕುಂದಾಪುರ ವಲಯದ ಕಥೊಲಿಕ್ ಸಭಾದ ಇತರ ಘಟಕಗಳ ಪದಾಧಿಕಾರಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಸಂಚಾಲಕ ಬರ್ನಾಡ್ ಡಿಕೋಸ್ತಾ ಸ್ವಾಗತಿಸಿದರು. ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿ ಕಾರ್ಯದರ್ಶಿ ಮೆಲ್ವಿನ್ ಪುಟಾರ್ಡೊ ನಿರೂಪಿಸಿದರು. ಕುಂದಾಪುರ ಘಟಕದ ಕಾರ್ಯದರ್ಶಿ ಪ್ರೇಮಾ ಡಿಕುನ್ಹಾ ವಂದಿಸಿದರು.

Exit mobile version