Kundapra.com ಕುಂದಾಪ್ರ ಡಾಟ್ ಕಾಂ

ವಸತಿ ರಹಿತ ಕುಟುಂಬಕ್ಕೆ ‘ಸೇವಾ ಸಂಕಲ್ಪ’ ತಂಡದಿಂದ ಮನೆ ಹಸ್ತಾಂತರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಇಲ್ಲಿನ ಸೇವಾ ಸಂಕಲ್ಪ ತಂಡ ದಾನಿಗಳ ಸಹಕಾರದೊಂದಿಗೆ ಗಂಗೊಳ್ಳಿ ಗ್ರಾಮದ ಬೇಲಿಕೇರಿ ಸಮೀಪದ ವಸತಿರಹಿತ ಕೃಷ್ಣ ಖಾರ್ವಿ ಕುಟುಂಬಕ್ಕೆ ನಿರ್ಮಿಸಿದ ‘ಸೇವಾ ಸಂಕಲ್ಪ’ಮನೆ ಹಸ್ತಾಂತರ ಮತ್ತು ಅದರ ಪ್ರವೇಶ ಸಮಾರಂಭ ನಡೆಯಿತು.

ಗಂಗೊಳ್ಳಿ ಮಂಡಲ ಪಂಚಾಯಿತಿ ಮಾಜಿ ಪ್ರಧಾನ ಬಿ. ಸದಾನಂದ ಶೆಣೈ ಮನೆಯ ನಾಮಫಲಕ ಅನಾವರಣಗೊಳಿಸಿ ಮನೆಯನ್ನು ಕೃಷ್ಣ ಖಾರ್ವಿ ಕುಟುಂಬಕ್ಕೆ ಹಸ್ತಾಂತರಿಸಿದರು. ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ತಾಲ್ಲೂಕು ಪಂಚಾಯಿತಿ ಸದಸ್ಯ ಸುರೇಂದ್ರ ಖಾರ್ವಿ, ಗಂಗೊಳ್ಳಿ ಗ್ರಾಮಲೆಕ್ಕಿಗ ರಾಘವೇಂದ್ರ ದೇವಾಡಿಗ, ಗಂಗೊಳ್ಳಿ ಎಸ್ಐ ಭೀಮಾಶಂಕರ ಎಸ್, ಹಿಂದು ಜಾಗರಣ ವೇದಿಕೆಯ ಕರ್ನಾಟಕ ಪ್ರಾಂತ ಪ್ರಚಾರಕ್ ಪ್ರಮುಖ್ ಅರವಿಂದ ಕೋಟೇಶ್ವರ, ಅರ್ಜುನ್ ಭಂಡಾರ್ಕಾರ್ ಮಂಗಳೂರು, ಪುರೋಹಿತ ಜಿ. ವೀರೇಶ ಭಟ್ , ಸೇವಾ ಸಂಕಲ್ಪ ತಂಡದ ಸದಸ್ಯರು, ಗಂಗೊಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು, ದಾನಿಗಳು ಇದ್ದರು.

ಜೋಪಡಿಯಿಂದ ಸುಸಜ್ಜಿತ ನಿವಾಸ: ಸ್ವಂತ ನಿವೇಶನ, ಮನೆ ಇಲ್ಲದೆ, ಗಂಗೊಳ್ಳಿ ಬೇಲಿಕೇರಿಯಲ್ಲಿ ತೆಂಗಿನ ಮಡಲು ಮತ್ತು ಟಾರ್ಪಲ್‌ನಿಂದನಿರ್ಮಿಸಿಕೊಂಡಿದ್ದ ಗುಡಿಸಲಿನಲ್ಲಿ ಕೃಷ್ಣ ಖಾರ್ವಿ ಕುಟುಂಬ ನೆಲೆಸಿತ್ತು. ಮೀನುಗಾರಿಕೆಯಿಂದ ಬದುಕು ಸಾಗುತ್ತಿತ್ತು. ಕುಟುಂಬದ ದಯನೀಯ ಸ್ಥಿತಿಯನ್ನು ನೋಡಿ, ಇದರಿಂದ ಪ್ರೇರಿತ ಯುವಕರ ತಂಡ, ಸೇವಾ ಸಂಕಲ್ಪ ಎಂಬ ವೇದಿಕೆ ರಚಿಸಿ, ಸ್ಥಳೀಯರೊಬ್ಬರು 5 ಸೆಂಟ್ಸ್ ನಿವೇಶನ ದಾನನೀಡಿದರು. ದಾನಿಗಳ ನೆರವಿನಿಂದ 1,000 ಚದರ ಅಡಿ ವಿಸ್ತೀರ್ಣದ ಸುಸಜ್ಜಿತ ಮನೆ ನಿರ್ಮಾಣವಾಯಿತು. ಸೇವಾ ಸಂಕಲ್ಪ ತಂಡದ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.

Exit mobile version