Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ರಕ್ತದಾನ ಮತ್ತು ಜನೌಷಧಿ ಕುರಿತು ಉಪನ್ಯಾಸ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಾರತೀಯ ಯುವ ರೆಡ್ ಕ್ರಾಸ್ ಸೊಸೈಟಿ ಹಾಗೂ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಕುಂದಾಪುರದ ವತಿಯಿಂದ ರಕ್ತದಾನದ ಮತ್ತು ಜನೌಷಧಿ ಯ ಕುರಿತು ಉಪನ್ಯಾಸ ಕಾರ್ಯಗಾರ ಇಲ್ಲಿನ ಕೋಡಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಗಳಾದ ಡಾ. ಸೋನಿ ಮಾತನಾಡಿ, ದಾನಗಳಲ್ಲೇ ಶ್ರೇಷ್ಠವಾದ ರಕ್ತದಾನದ ಮೂಲಕ ಇನ್ನೊಬ್ಬರ ಬದುಕಿಗೆ ದಾರಿ ಮಾಡಿಕೊಡಬಹುದು ಎಂದು ಹೇಳಿದರು.

ರೆಡ್‌ಕ್ರಾಸ್ ಸೊಸೈಟಿಯ ಚೇರ್‌ಮ್ಯಾನ್ ಜಯಕರ ಶೆಟ್ಟಿ, ಜನೌಷದಿಯ ಕುರಿತು ಮಾಹಿತಿಯನ್ನು ವಿದ್ಯಾರ್ಥಿ ಸಮೂಹಕ್ಕೆ ತಿಳಿಸಿದರು.

ರೆಡ್‌ಕ್ರಾಸ್ ಸೊಸೈಟಿಯ ಚೇರ್‌ಮ್ಯಾನ್ ಜಯಕರ್ ಶೆಟ್ಟಿ, ಖಜಾಂಚಿ ಶಿವರಾಮ್ ಶೆಟ್ಟಿ, ಸಂಯೋಜಕರಾದ ಸತ್ಯನಾರಾಯಣ ಪುರಾಣಿಕ್, ಸದಸ್ಯರಾದ ಡಾ.ಸೋನಿ ಡಿ’ಕೋಸ್ಟಾ ಹಾಗೂ ಗಣೇಶ್ ಆಚಾರ್ಯ ಸಂಸ್ಥೆಯ ಅಧ್ಯಕ್ಷರಾದ ಹಾಜಿ ಅಬ್ದುಲ್ ರೆಹಮಾನ್, ಪ್ರಾಂಶುಪಾಲರಾದ ಡಾ.ಶಮೀರ್, ಕಾಲೇಜಿನ ರೆಡ್‌ಕ್ರಾಸ್ ಸಂಯೋಜಕರಾದ ಅಹಮ್ಮದ್ ಖಲೀಲ್ ಹಾಗೂ ವಿದ್ಯಾರ್ಥಿ ಸಂಯೋಜಕ ತನ್ಙೀಮ್ ತೃತೀಯ ಬಿಕಾಂ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ತೃತೀಯ ಬಿ.ಸಿ.ಎ ವಿದ್ಯಾರ್ಥಿ ತಸ್ಮಿಯಾ ನಿರ್ವಹಿಸಿದರು, ಗಣಕಶಾಸ್ತ್ರ ಉಪನ್ಯಾಸಕರಾದ ಅಹಮ್ಮದ್ ಖಲೀಲ್ ಸ್ವಾಗತಿಸಿದರು ಹಾಗೂ ತೃತೀಯ ಬಿ.ಕಾಂ ವಿದ್ಯಾರ್ಥಿ ಶುಹೈದ್ ವಂದಿಸಿದರು.

Exit mobile version