Kundapra.com ಕುಂದಾಪ್ರ ಡಾಟ್ ಕಾಂ

ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್‌ಗೆ ಕರ್ನಾಟಕ ತಂಡದ ಸಾರಥ್ಯ ವಹಿಸಿದ ಹೆಮ್ಮಾಡಿಯ ರೈಸನ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಒಡಿಶಾದ ಭುವನೇಶ್ವರದಲ್ಲಿ ಮಾ.5ರಿಂದ 11ರ ವರೆಗೆ ನಡೆಯಲಿರುವ 679ನೇ ರಾಷ್ಟ್ರೀಯ ಸೀನಿಯರ್ ವಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ವಾಲಿಬಾಲ್ ತಂಡದ ಸಾರಥ್ಯವನ್ನು ಹೆಮ್ಮಾಡಿಯ ರೈಸನ್ ಬೆನೆಟ್ ರೆಬೆಲ್ಲೂ ವಹಿಸಲಿದ್ದಾರೆ.

ಹೆಮ್ಮಾಡಿ ಗ್ರಾಮದ ಮೂವತ್ತೂಮಡಿಯ ಕೃಷಿಕ ದಂಪತಿ ಬೋನಿಫಾಸ್ – ಜೆಸಿಂತಾ ರೆಬೆಲ್ಲೂ ಅವರ ಪುತ್ರನಾದ ರೈಸನ್ ಅವರು ವಾಲಿಬಾಲ್ ಆಟಗಾರನಾಗಿ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದ್ದಾರೆ. 2009ರಲ್ಲಿ ನಡೆದ 67ನೇ ರಾಷ್ಟ್ರೀಯ ಚಾಂಪಿಯನ್ ಶಿಪ್ನಲ್ಲಿ ರಾಜ್ಯ ತಂಡ ಗೆದ್ದು ಬರುವಲ್ಲಿ ರೈಸನ್ ಪಾತ್ರ ಪ್ರಮುಖವಾಗಿತ್ತು 2013ರಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ರಾಷ್ಟ್ರ ಮಟ್ಟದ ಜೂನಿಯರ್ ಪಂದ್ಯಾವಳಿ, ಮಹಾರಾಷ್ಟ್ರದಲ್ಲಿ ಜರುಗಿದ ಯುವ ರಾಷ್ಟ್ರೀಯ ಪಂದ್ಯಾವಳಿ, 2014ರಲ್ಲಿ ರಾಜಸ್ಥಾನದಲ್ಲಿ ನಡೆದ ರಾಷ್ಟ್ರ ಮಟ್ಟದ ಜೂನಿಯ್ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನಿಡಿದ್ದ ರೈಸನ್, ರಾಜನಸ್ಥಾನದಲ್ಲಿ ನಡೆದ ಯುವ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ರಜತ ಪದಕ ಜಯಿಸಿದ್ದರು. 2015ರಲ್ಲಿ ತಮಿಳುನಾಡಿನಲ್ಲಿ ಜರುಗಿದ ಫೆಡರೇಶನ್ ಕಫ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ, 2016ರ ಫೆಡರೇಶನ್ ಕಪ್ ಪಂದ್ಯಾವಳಿಯಲ್ಲಿ ರಜತ ಪದಕ ಒಲಿದಿತ್ತು 2020ರ ಫಡ್ ಕಪ್ನಲ್ಲಿ ಕರ್ನಾಟಕ ತಂಡ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಶ್ರೀಲಂಕಾದಲ್ಲಿ ನಡೆದ ೧೦ನೇ ಏಶ್ಯನ್ ಚಾಂಪಿಯನ್ಶಿಪ್ನಲ್ಲಿ ಉತ್ತಮ ಪ್ರದರ್ಶನ 2019ರಂದು ಚೆನ್ನೈಯಲ್ಲಿ ನಡೆದ ಸೀನಿಯರ್ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡ ಚಾಂಪಿಯನ್ ಆಗುವಲ್ಲಿ ಅದ್ಭುತ ನಿರ್ವಹಣೆ ತೋರಿದ ಇವರು ಚಿನ್ನದ ಪದಕ ಜಯಿಸಿದ್ದಾರೆ.

ಬಾಲ್ಯ ಶಿಕ್ಷಣವನ್ನು ಹೆಮ್ಮಾಡಿಯಲ್ಲಿ ಮುಗಿಸಿದ್ದ ರೈಸನ್ ಬಳಿಕ ಕಾಲೇಜು ಶಿಕ್ಷಣಕ್ಕಾಗಿ ಬೆಂಗಳೂರು ಸೇರಿದ್ದರು. ಪ್ರಸ್ತುತ ಅವರು ಅಂಚೆ ಇಲಾಖೆಯಲ್ಲಿ ಉದ್ಯೋಗಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆರಂಭದಲ್ಲಿ ಕುಂದಾಪುರದ ವಾಲಿಬಾಲ್ ಫ್ರೆಂಡ್ಸ್ ರೈಸನ್ ಅವರಿಗೆ ಉತ್ತಮ ತರಬೇತಿ ನೀಡಿತ್ತು.

ನವೀನ್ ಕಾಂಚನ್‌ಗೂ ಸ್ಥಾನ:
ಚಿತ್ತೂರಿನ ನವೀನ್ ಕಾಂಚನ್ ರಾಜ್ಯ ತಂಡದಲ್ಲಿ ಸ್ಥಾನ ಪಡೆದಿರುವ ಕುಂದಾಪುರ ಮೂಲದ ಮತ್ತೋರ್ವ ಆಟಗಾರ ನವೀನ್ ಕಾಂಚನ್. ಇವರು ಚಿತ್ತೂರು ಗ್ರಾಮದ ನ್ಯಾಗಳಮನೆ ಮಂಜುನಾಥ – ರತ್ನಾ ದಂಪತಿ ಪುತ್ರ. ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಅಚಿತಿಮ ವರ್ಷದ ಬಿ. ಕಾಂ ವ್ಯಾಸಾಂಗ ಮುಗಿಸಿದ್ದಾರೆ. ಇಲ್ಲಿನ ದೈಹಿಕ ಶಿಕ್ಷಣ ನಿರ್ದೇಶಕ ಸೂರಜ್ ಕುಮಾರ್ ಶಟಿ, ಕುಂದಾಪುರದ ರಾಷ್ಟ್ರೀಯ ವಾಲಿಬಾಲ್ ಆಟಗಾರ ಮಹಮ್ಮದ್ ಸಮೀರ್ ಮತ್ತು ಸುನೀಲ್ ಕುಮಾರ್ ಶೆಟ್ಟಿ ಅವರ ಗರಡಿಯಲ್ಲಿ ಮೂಡಿ ಬಂದ ವಾಲಿಬಾಲ್ ಪ್ರತಿಭೆಯಾಗಿದ್ದಾರೆ. ನವೀನ್ ವಾಲಿಬಾಲ್ನ ಸರ್ವಿಸ್, ಪಾಸಿಂಗ್ ಆಟ್ಯಾಕಿಂಗ್, ಬ್ಲಾಕಿಂಗ್ ವಿಭಾಗಗಳಲ್ಲಿ ಉತ್ತಮ ಹಿಡಿದ ಸಾಧಿಸಿದ್ದಾರೆ.

ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ನಾಯಕನಾಗಿ ಪ್ರತಿನಿಧಿಸುತ್ತಿರುವುದಕ್ಕೆ ಖುಷಿಯಿದೆ. ಮುಂದೆ ರಾಷ್ಟ್ರೀಯ ವಾಲಿಬಾಲ್ ತಂಡದಲ್ಲಿ ಆಡಬೇಕು ಎಂಬ ಗುರಿ ನನ್ನದು – ರೈಸನ್ ಬೆನೆಟ್ ರೆಬೆಲ್ಲೂ

Exit mobile version