Kundapra.com ಕುಂದಾಪ್ರ ಡಾಟ್ ಕಾಂ

ಲಾವಣ್ಯ ಬೈಂದೂರು 44ನೇ ವಾರ್ಷಿಕೋತ್ಸವ, ರಂಗವೈವಿಧ್ಯ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಅತ್ಯಂತ ಹಿಂದುಳಿದ ಗ್ರಾಮೀಣ ಭಾಗದಲ್ಲಿ ಕಲಾ ಸಂಘಟನೆ ಮಾಡಿ ಅದನ್ನು ಯಶಸ್ವಿಯಾಗಿ ಮುನ್ನೆಡೆಸುವುದು ಸುಲಭದ ಮಾತಲ್ಲ. ನಾಟಕ ಅಭಿರುಚಿಯ ಪ್ರೇಕ್ಷಕರ ಸೃಷ್ಠಿ ಮಾಡುವ ಜತೆಗೆ ನಾಟಕ ವಿಮರ್ಶೆ ಮಾಡುವ ಸೃಜನತ್ಮಕ ಪ್ರೇಕ್ಷಕರ ಹಿಂದೆ ಲಾವಣ್ಯದ ಕ್ರೀಯಾಶೀಲತೆಯಿದೆ ಎಂದು ಮಾಜಿ ಶಾಸಕ ಕೆ. ಲಕ್ಷ್ಮಿನಾರಾಯಣ ಹೇಳಿದರು.

ಅವರು ಬೈಂದೂರು ಶಾರದಾ ವೇದಿಕೆಯಲ್ಲಿ ನಡೆದ ಲಾವಣ್ಯದ ೪೪ನೇ ವಾರ್ಷಿಕೋತ್ಸವ ಹಾಗೂ ರಂಗವೈವಿಧ್ಯ – 2021 ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ನಾಲ್ಕು ದಶಕಗಳ ಕಾಲ ಕಲಾ ಸೇವೆಯಲ್ಲಿ ತೊಡಗಿಸಿಕೊಂಡ ಲಾವಣ್ಯ ಮತ್ತೊಂದು ತಲೆಮಾರಿನ ಕಲಾವಿದರ ಹುಟ್ಟಿಗೂ ಕಾರಣವಾಗಿದ್ದು, ಕಲಾದೇವತೆಗೆ ಕೊಟ್ಟ ಕೊಡುಗೆಯಾಗಿದೆ. ಇಂದು ರಾಜ್ಯಾಂದತ ಬೈಂದೂರು ಹೆಸರು ಹೇಳಿದರೆ ಲಾವಣ್ಯದ ಮೂಲಕ ಗುರುತಿಸಿವಷ್ಟು ಸಂಸ್ಥೆ ಎತ್ತರಕ್ಕೆ ಬೆಳೆದಿದೆ ಎಂದರು.

ಲಾವಣ್ಯದ ಅಧ್ಯಕ್ಷ ಹರೇಗೋಡು ಉದಯ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಈ ಸಾಲಿನ ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ರಂಗ ಪ್ರಶಸ್ತಿ ಪುರಸ್ಕೃತ ಉಪ್ಪುಂದ ಶ್ರೀನಿವಾಸ ಪ್ರಭು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ (ಪತ್ರಿಕಾರಂಗ) ಪುರಸ್ಕೃತ ಪತ್ರಕರ್ತರಾದ ಶ್ರೀಪತಿ ಹೆಗಡೆ ಹಕ್ಲಾಡಿ, ಉದಯಶಂಕರ್ ಪಡಿಯಾರ್ ಉಪ್ಪುಂದ ಇವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಕುಂದಾಪುರ ತಾಲೂಕು ಕಸಾಪ ಅಧ್ಯಕ್ಷ ಡಾ. ಕಿಶೋರಕುಮಾರ್ ಶೆಟ್ಟಿ ಶುಭಾಶಂಸನೆಗೈದರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಎಂ. ಕೆ. ಮಠ ಉಪ್ಪಿನಂಗಡಿ, ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಪಕಿ ಮೀನಾಕ್ಷಿ ಅಶೋಕ್, ಕಾರ್ಪೋರೇಶನ್ ಬ್ಯಾಂಕ್ ಕೊಲ್ಲೂರು ಶಾಖಾ ಪ್ರಬಂಧಕ ರಾಮಕೃಷ್ಣ ದೇವಾಡಿಗ ಉಪಸ್ಥಿತರಿದ್ದರು.

ಸಂಸ್ಥೆಯ ಪೂರ್ವಾಧ್ಯಕ್ಷ ಗಿರೀಶ್ ಬೈಂದೂರು ಸ್ವಾಗತಿಸಿ, ಸುಬ್ರಹ್ಮಣ್ಯ ಜಿ. ಉಪ್ಪುಂದ ನಿರೂಪಿಸಿ, ಕಾರ್ಯದರ್ಶಿ ಮೂರ್ತಿ ಬೈಂದೂರು ವಂದಿಸಿದರು. ನಂತರ ಲಾವಣ್ಯ ಕಲಾವಿದರು ಕುಂದಗನ್ನಡದಲ್ಲಿ ಕುಷ್ಣ ಸಂಧಾನ ಹಾಸ್ಯ ನಾಟಕ ಪ್ರದರ್ಶಿಸಿದರು.

Exit mobile version