Kundapra.com ಕುಂದಾಪ್ರ ಡಾಟ್ ಕಾಂ

ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನ: ಪ್ರತಿಷ್ಠಾ ವರ್ಧಂತ್ಯುತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಿಶ್ವಕರ್ಮ ಜನಾಂಗ ಪಂಚ ಕಸುಬುಗಳನ್ನು ಮಾಡುವ ಶ್ರೇಷ್ಠ ಜನಾಂಗ. ಬ್ರಾಹ್ಮಣ್ಯ ಮರೆತು, ವಿಶ್ವಕರ್ಮರು ಎಸ್‌ಟಿ ಮೀಸಲಾತಿಗೆ ಸೇರುವ ಬಗ್ಗೆ ಚಿಂತನೆ ಸಮಾಂಜಸವಲ್ಲ. ವಿಶ್ವಕರ್ಮ ಸಮಾಜ ಮುಂದೆಯೂ ಕೂಡ ವಿಶ್ವಕರ್ಮ ಸಮಾಜವಾಗಿ ಉಳಿಯಬೇಕು. ವಿಶ್ವಕರ್ಮರು ಹಿಂದಿನಿಂದಲೂ ತಮ್ಮ ಜನಾಂಗದ ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ಹೋರಾಟ ಮಾಡುತ್ತ ಬಂದ ಸಮಾಜ ಎಂದು ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀ ಹೇಳಿದರು.

ಅವರು ಶ್ರೀ ಕ್ಷೇತ್ರ ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ನಡೆದ ಪ್ರತಿಷ್ಠಾ ವರ್ಧಂತ್ಯುತ್ಸವ ಧಾರ್ಮಿಕ ಸಭೆ ಹಾಗೂ ಶ್ರೀ ಕಾಳಿಕಾಂಬಾ ಎಜ್ಯುಕೇಶನಲ್ ಟ್ರಸ್ಟ್ ವತಿಯಿಂದ ಕೊಡಮಾಡಿದ ವಿದ್ಯಾರ್ಥಿ ವೇತನ ಮತ್ತು ಸನ್ಮಾನ ಸಭೆಯಲ್ಲಿ ಮಾತನಾಡಿದರು.

ವಿಶ್ವಕರ್ಮ ಸಮಾಜ ವಿದ್ಯಾರ್ಥಿಗಳಿವೆ ವಿದ್ಯಾರ್ಥಿ ವೇತನ ನೀಡುದರ ಜತೆಯಲ್ಲಿ ವಿದ್ಯಾರ್ಥಿಗಳಿಗಾಗಿ ಒಂದು ಸುಸಜ್ಜಿತವಾದ ವಿದ್ಯಾರ್ಥಿನಿಲಯ ಸ್ಥಾಪನೆ ಮಾಡಿ, ವಿದ್ಯಾರ್ಜನೆ ನೀಡುವ ಕೆಲಸವಾಗಬೇಕು. ಉಪ್ರಳ್ಳಿಯ ಶ್ರೀ ಕಾಳಿಕಾಂಬಾ ಎಜ್ಯುಕೇಶನಲ್ ಟ್ರಸ್ಟ್ ವಿದ್ಯಾರ್ಥಿ ವೇತನದ ಜತೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಸಮಾಜದ ಚುನಾಯಿತ ಸದಸ್ಯರಿಗೆ ಸಮ್ಮಾನ ಮಾಡಿರುವ ಕಾರ್ಯ ಪ್ರಶಂಸನೆಯವಾಗಿದೆ. ಶ್ರೀ ಕ್ಷೇತ್ರ ಉಪ್ರಳ್ಳಿ ಸಾಕಷ್ಟು ಅಭಿವೃದ್ಧಿಯನ್ನು ಕಾಣುತ್ತಿದೆ. ಮುಂದೆ ಈ ಕ್ಷೇತ್ರವು ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುದರಿಂದ ಕ್ಷೇತ್ರವು ಪ್ರೇಕ್ಷಣಿಯ ಸ್ಥಳವಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಗುರುಪೀಠದಿಂದ ವಿಶ್ವಕರ್ಮ ಸಮಾಜ ಸಾಕಷ್ಟು ಅಭಿವೃದ್ಧಿ ಹೊಂದಿದೆ. ವಿಶ್ವಕರ್ಮ ಜನಾಂಗ ಸಂಘಟಿತರಾಗುತ್ತಿರುವ ಸಮಾಜ. ಈ ಜನಾಂಗ ಬುದ್ಧಿವಂತ, ಪರಿಶ್ರಮ ಹಾಗೂ ದೇವರ ಬಗ್ಗೆ ಭಕ್ತಿ ಇರುವ ಸಮಾಜವಾಗಿದೆ. ಈ ಹಿನ್ನಲೆಯಲ್ಲಿ ಕ್ಷೇತ್ರ ಅಭಿವೃದ್ಧಿಗಾಗಿ ಸಮುದಾಯ ಭವನ ನಿರ್ಮಾಣಕ್ಕಾಗಿ ರೂ. ಒಂದು ಕೋಟಿ ಮತ್ತು ರಸ್ತೆ ಹಾಗೂ ಚರಂಡಿಯ ವಾಲ್ ನಿರ್ಮಾಣಕ್ಕೆ ರೂ. 1.10ಕೋಟಿ ಸೇರಿದಂತೆ ಒಟ್ಟು ರೂ. 2.10 ಕೋಟಿ ಅನುದಾನ ನೀಡಲಾಗಿದೆ. ಮುಂದೆಯೂ ಕೂಡ ಅನುದಾನ ನೀಡುವ ಭರವಸೆ
ನೀಡಿದರು.

ಮುಖ್ಯ ಅತಿಥಿಗಳಾಗಿ ಬಾರ್ಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ, ಇಂಜಿನಿಯರ್ ಜಯರಾಜ್ ಆಚಾರ್ಯ ಬ್ರಹ್ಮಾವರ, ರೇಖಾ ನರಸಿಂಹ ಆಚಾರ್ಯ ಮುಂಬಯಿ, ಭಟ್ಕಳ ಉದ್ಯಮಿ ಜಗದೀಶ ಆಚಾರ್ಯ, ಕ್ಷೇತ್ರ ಮೊಕ್ತೇಸರರಾದ ಪ್ರಭಾಕರ ಆಚಾರ್ಯ ಚಿತ್ತೂರು, ಶ್ರೀಧರ ಆಚಾರ್ಯ ಆಲೂರು, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಆಚಾರ್ಯ ಕೊಡ್ಲಾಡಿ, ಜತೆ ಕಾರ್ಯದರ್ಶಿ ಕರುಣಾಕರ ಆಚಾರ್ಯ ಮರವಂತೆ, ಮಾಗಣಿಮೊಕ್ತೇಸರರ ಪ್ರತಿನಿಧಿ ದಿವಾಕರ ಆಚಾರ್ಯ ಮಾರಣಕಟ್ಟೆ, ಜೀಣೋದ್ಧಾರ ಸಮಿತಿ ಅಧ್ಯಕ್ಷ ಉದಯ ಆಚಾರ್ಯ ಕಟ್‌ಬೇಲ್ತೂರು, ಸೇವಾ ಸಮಿತಿ ಅಧ್ಯಕ್ಷ ನಾಗೇಂದ್ರ ಆಚಾರ್ಯ ಕುಂದಬಾರಂದಾಡಿ, ಮಹಿಳಾ ಸಮಿತಿ ಗೌರವಾಧ್ಯಕ್ಷೆ ಜಲಜ ಚಂದ್ರಯ್ಯ ಆಚಾರ್ಯ ಕಳಿ, ಅಧ್ಯಕ್ಷೆ ಸುಶೀಲ ಚಂದ್ರಯ್ಯ ಆಚಾರ್ಯ ಅಂಬಾಗಿಲು, ಎಜ್ಯುಕೇಶನಲ್ ಟ್ರಸ್ಟ್‌ನ ಗೌರವಾಧ್ಯಕ್ಷ ಚಂದ್ರಯ್ಯ ಆಚಾರ್ಯ ನಾಡಗುಡ್ಡೆಯಂಗಡಿ, ಉಪಾಧ್ಯಕ್ಷ ಗಣೇಶ ಆಚಾರ್ಯ ಸಾಲಿಗ್ರಾಮ, ಸದಸ್ಯರಾದ ಕೆ. ಉದಯ ಆಚಾರ್ಯ ಕುಂದಾಪುರ, ಯೋಗೇಶ ಆಚಾರ್ಯ ಬಸ್ರೂರು, ಗುರುರಾಜ ಆಚಾರ್ಯ ಹಟ್ಟಿಯಂಗಡಿ, ರವೀಂದ್ರ ಆಚಾರ್ಯ ಸಬ್ಲಾಡಿ, ಪ್ರಕಾಶ ಆಚಾರ್ಯ ಬಗ್ವಾಡಿ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಮತ್ತು ಶ್ರೀ ವಿಶ್ವಕರ್ಮ ನಿಗಮಕ್ಕೆ ನಿರ್ದೇಶಕರಾಗಿ ಆಯ್ಕೆಗೊಂಡ ಚಂದ್ರಯ್ಯ ಆಚಾರ್ಯ ಕಳಿ ಅವರನ್ನು ಸಮ್ಮಾನಿಸಲಾಯಿತು. ನೂತನವಾಗಿ ಗ್ರಾ. ಪಂ.ಗೆ ಆಯ್ಕೆಗೊಂಡ ಸಮಾಜದ ಜನಪ್ರತಿನಿಧಿಗಳನ್ನು ಸಮ್ಮಾನಿಸಲಾಯಿತು. ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಮ್ಮಾನ ಜರಗಿತು, ವಿದ್ಯಾರ್ಥಿವೇತನ ವಿತರಣೆ ನಡೆಯಿತು.

ಶ್ರೀ ಕಾಳಿಕಾಂಬಾ ಎಜ್ಯುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಯು. ಕೆ. ಎಸ್. ಸೀತಾರಾಮ ಆಚಾರ್ಯ ಸಭೆಯ ಅಧ್ಯಕ್ಷತೆ ವಹಿಸಿದರು.
ಕಾರ್ಯದರ್ಶಿ ಸುಧಾಕರ ಆಚಾರ್ಯ ತ್ರಾಸಿ ಸ್ವಾಗತಿಸಿದರು. ಕೋಶಾಧಿಕಾರಿ ಸುಧಾಕರ ಆಚಾರ್ಯ ಕುಂದಾಪುರ ಲೆಕ್ಕಪತ್ರ ಮಂಡಿಸಿದರು. ಸದಸ್ಯ ಯಶೋಧರ ಆಚಾರ್ಯ ವರದಿ ವಾಚಿಸಿದರು. ಸದಸ್ಯ ಮಹೇಶ ಆಚಾರ್ಯ ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣಯ್ಯ ಆಚಾರ್ಯ ಮರವಂತೆ ವಂದಿಸಿದರು.

 

Exit mobile version