Site icon Kundapra.com ಕುಂದಾಪ್ರ ಡಾಟ್ ಕಾಂ

ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಹರಿಕಥಾ ಕಲಾಕ್ಷೇಪ’

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಲಲಿತ ಕಲಾ ಸಂಘದ ಆಶ್ರಯದಲ್ಲಿ ‘ಹರಿಕಥಾ ಕಲಾಕ್ಷೇಪ’ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.

ಹರಿಕಥಾ ಯುವ ಕಲಾವಿದೆ ಬೆಂಗಳೂರು ರಾಜಾಜಿನಗರದ ಇ.ಎಸ್.ಐ.ಸಿ. ವೈದ್ಯಕೀಯ ಕಾಲೇಜಿನ ಅಂತಿಮ ವೈದ್ಯಕೀಯ ವಿದ್ಯಾರ್ಥಿನಿ ತುಷಾರಾ ಎಲ್. ಆಚಾರ್ಯ ಶ್ರೀ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರದ ಐತಿಹ್ಯದ ಕುರಿತಾಗಿ ಹರಿಕಥೆ ಪ್ರಸ್ತುತ ಪಡಿಸಿದರು. ವಿದ್ವಾನ್ ಪ್ರದೀಪ್ ಉಪಾಧ್ಯ ಹಾಗೂ ವಿದ್ವಾನ್ ಅನಂತ ಪದ್ಮನಾಭ ಭಟ್ ಕ್ರಮವಾಗಿ ತಬಲ ಮತ್ತು ಹಾರ್ಮೋನಿಯಂನಲ್ಲಿ ಸಹಕರಿಸಿದರು.

ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ, ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ, ಲಲಿತ ಕಲಾ ಸಂಘದ ಸಂಯೋಜಕರಾದ ಅಮೃತಾ, ಮಾಲತಿ ಉಪಸ್ಥಿತರಿದ್ದರು. ಸಹ ಸಂಯೋಜಕರಾದ ರಸಿಕ್ ಕುಮಾರ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ, ಶುಭಾ ಅಡಿಗ ನಿರೂಪಿಸಿದರು.

Exit mobile version