ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಮತ್ತು ಸಹಾಯಕ ಪ್ರಾಧ್ಯಾಪಕಿ ಡಾ. ಗಾಯತ್ರಿ ಪೈ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ದೊರೆತಿದೆ.
ಅವರು ಮಂಗಳೂರು ವಿಶ್ವ ವಿದ್ಯಾನಿಲಯದ ಜೀವ ವಿಜ್ಞಾನ ವಿಭಾಗದ ಪ್ರೊ. ಚಂದ್ರ ಎಂ. ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಐಸೋಲೇಶನ್, ಐಡೆಂಟಿಫಿಕೇಶನ್ ಆಂಡ್ ಆಂಟಿಮೈಕ್ರೋಬಿಯಲ್ ಆಕ್ಟಿವೀಟೀಸ್ ಆಫ್ ಆಫೆಂಡೋಪೈಥಿಕ್ ಫಂಗಿ ಫ್ರಾಮ್ ಮೆಡಿಶಿನಲ್ ಪ್ಲಾಂಟ್ಸ್ ಆಫ್ ಉಡುಪಿ ಡಿಸ್ಟ್ರಿಕ್ಟ್ (Isolation, Identification and Antimicrobial Activities of Endophytic Fungi from Medicinal Plants of Udupi District) ಎಂಬ ಮಹಾಪ್ರಬಂಧವನ್ನು ಪಿಹೆಚ್.ಡಿ ಪದವಿಗಾಗಿ ಮಂಡಿಸಿರುತ್ತಾರೆ.