Kundapra.com ಕುಂದಾಪ್ರ ಡಾಟ್ ಕಾಂ

ಶಿರೂರು ಮಾದರಿ ಶಾಲೆ: ನೂತನ ಶಾಲಾ ವಾಹನ ಲೋಕಾರ್ಪಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜಿಲ್ಲೆಯ ಉತ್ತರದ ಶಿರೋಭಾಗದಲ್ಲಿರುವ ಗ್ರಾಮೀಣ ಪ್ರದೇಶ ಶಿರೂರಿನ ಸರಕಾರಿ ಮಾದರಿ ಶಾಲೆ ಶತಮಾನಗಳ ಇತಿಹಾಸ ಹೊಂದಿದ್ದು, ಉತ್ತಮ ಗುಣಮಟ್ಟದ ಶೈಕ್ಷಣಿಕ ವಾತಾವರಣ ಹಾಗೂ ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ವ್ಯವಸ್ಥೆ ಇರುವುದರಿಂದ ಈ ಶಾಲೆ ಇತರ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು.

ಅವರು ಶನಿವಾರ ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಇಲ್ಲಿನ ಹಳೆ ವಿದ್ಯಾರ್ಥಿಗಳು ಮತ್ತು ದಾನಿಗಳ ಸಹಕಾರದಿಂದ ಸುಮಾರು 21 ಲಕ್ಷ ರೂ. ವೆಚ್ಚದಲ್ಲಿ ಕೊಡಮಾಡಿದ ನೂತನ ಶಾಲಾ ವಾಹನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಶಾಲೆಯ ಆವರಣದಲ್ಲಿ ಉತ್ತಮ ವಾತಾವರಣ ನಿರ್ಮಿಸಲು ಪ್ರಯತ್ನಿಸಬೇಕು. ಒಂದು ಶಿಕ್ಷಣ ಸಂಸ್ಥೆ ಅಭಿವೃದ್ಧಿ ಹೊಂದಲು ಶಿಕ್ಷಕರ ಮತ್ತು ವಿದ್ಯಾಭಿಮಾನಿಗಳ ಕೊಡುಗೆ ಅಪಾರವಾಗಿರುತ್ತದೆ ಎಂದ ಅವರು, ವಿದ್ಯಾರ್ಥಿ ಜೀವನದಲ್ಲಿ ಗಳಿಸಿದ ಆದರ್ಶಗಳನ್ನು ಇಟ್ಟುಕೊಂಡು ಸಾಧನೆ ಮಾಡಲು ಸಾಧ್ಯವಿದೆ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ಶಾಸಕರು ಸ್ವತಃ ನೂತನ ಶಾಲಾ ವಾಹನವನ್ನು ಸ್ವಲ್ಪ ದೂರ ಚಲಾಯಿಸಿ ಕಾರ್ಯಕ್ರಮದಲ್ಲಿ ಸೇರಿದವರ ಮೆಚ್ಚುಗೆ ಪಡೆದರು.

ಬೈಂದೂರು ತಾಪಂ ಅಧ್ಯಕ್ಷ ಮಹೇಂದ್ರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಹೊಸ್ಮನೆ ಇವರನ್ನು ಸನ್ಮಾನಿಸಲಾಯಿತು. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಗ್ರಾಪಂ ಅಧ್ಯಕ್ಷೆ ದಿಲ್‌ಶಾದ್ ಬೇಗಂ, ಉಪಧ್ಯಕ್ಷ ರವೀಂದ್ರಶೆಟ್ಟಿ ಪಟೇಲರಮನೆ, ಸದಸ್ಯರಾದ ನಾಗಯ್ಯ ಶೆಟ್ಟಿ, ರವೀಂದ್ರ ಶೆಟ್ಟಿ ಆರ‍್ಮಕ್ಕಿ, ಪ್ರಸನ್ನ ಶೆಟ್ಟಿ ಕರಾವಳಿ, ಪ್ರೇಮಾ ಮೊಗೇರ್, ಉಷಾ ಗಾಣಿಗ, ನಾಗರತ್ನ ಆಚಾರ್ಯ, ಸುರೇಂದ್ರ ದೇವಾಡಿಗ, ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ ಮೇಸ್ತ, ಎಸ್‌ಡಿಸಿ ಅಧ್ಯಕ್ಷ ಸತೀಶಕುಮಾರ್ ಶೆಟ್ಟಿ, ಉಪಾಧ್ಯಕ್ಷ ಚಿಕ್ಕು ಪೂಜಾರಿ, ಹಿರಿಯ ಸದಸ್ಯ ಅಬುಬಕರ್, ಸಯಯದ್ ಜಾಫರ್, ಎಸ್. ಎಂ. ಸಯೀದ್, ಸಾಧನದಾಸ್ ಅಜ್ಮಲ್ ಸಹೇಬ್, ದಿನೆಶ್‌ಕುಮರ್, ಇಸಿಒ ಚಂದ್ರ ದೇವಾಡಿಗ, ಬಿಆರ್‌ಪಿ ಕರುಣಾಕರ ಶೆಟ್ಟಿ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಸ್. ಪ್ರಕಾಶ ಪ್ರಭು ಮೊದಲಾದವರು ಇದ್ದರು.

ಮಹಾದೇವ ಬಿಲ್ಲವ ಪ್ರಾಸ್ತಾವಿಸಿದರು. ಮುಖ್ಯಶಿಕ್ಷಕ ಶಂಕರ್ ಸ್ವಾಗತಿಸಿ, ಸಿ. ಎನ್. ಬಿಲ್ಲವ ನಿರೂಪಿಸಿದರು. ಸೋಮರಾಯ ಜನ್ನು ವಂದಿಸಿದರು.

Exit mobile version