Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಸಿಟಿ ಜೇಸಿರೆಟ್‌ನಿಂದ ಮಹಿಳಾ ಸಾಧಕಿಯರಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜೇಸಿಐ ಬೈಂದೂರು ಸಿಟಿ ಜೇಸಿರೆಟ್ ವಿಭಾಗ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳಾ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಮಹಿಳಾ ಸದಸ್ಯರಿಗೆ ಆಟೋಟ ಸ್ಪರ್ಧೆ ಶನಿವಾರ ಸಂಜೆ ಮರವಂತೆ ನೇತಾಜಿ ಸುಭಾಷ್ ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆಯ ಐ ವಸಂತ ಕುಮಾರಿ ಕಲಾಂಗಣದಲ್ಲಿ ನಡೆಯಿತು.

ಜೇಸಿಐ ಬೈಂದೂರು ಸಿಟಿಯ ಜೇಸಿರೆಟ್ ಅಧ್ಯಕ್ಷೆ ಜೇಸಿರೆಟ್ ಅನಿತಾ ಆರ್ ಕೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಮಹಿಳೆಯರಾಗಲಿ, ಪುರುಷರಾಗಲಿ ಅಹಂ ಬಿಟ್ಟಾಗ ಸಮಾಜ ಸುಧಾರಣೆಯಾಗಲು ಸಾಧ್ಯ ಹೊರತು ಮಹಿಳಾ ಮೀಸಲಾತಿಯ ಹೋರಾಟದಿಂದ ಸಮಾನತೆಗಳಿಸಲು ಸಾಧ್ಯವಿಲ್ಲ. ಪ್ರತಿ ಮನೆಯಲ್ಲೂ ಸಮಾನತೆ ಆರಂಭಗೊಂಡರೆ ಮಾತ್ರ ಇದು ಯಶಸ್ಸುಗೊಳ್ಳಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಜೇಸಿಐ ಬೈಂದೂರು ಸಿಟಿ ಘಟಕದ ಅಧ್ಯಕ್ಷ ಜೇಸಿ ಎಚ್.ಜಿ.ಎಫ್ ಶ್ರೀಧರ ಆಚಾರ್ಯ, ವಲಯಾಧಿಕಾರಿ ಜೇಸಿ ಎಚ್.ಜಿ.ಎಫ್ ಮಣಿಕಂಠ ಎಸ್, ಘಟಕದ ಕಾರ್ಯದರ್ಶಿ ಜೇಸಿ ಎಚ್.ಜಿ.ಎಫ್ ಸವಿತಾ ದಿನೇಶ್ ಗಾಣಿಗ, ಸದಸ್ಯೆ ಜೇಸಿ ಎಚ್.ಜಿ.ಎಫ್ ದೀಪಿಕಾ ಎಂ ಆಚಾರ್ಯ, ಇದ್ದರು.

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳಾ ಸಾಧಕಿಯರಿಗೆ ಸನ್ಮಾನ:
ರೇಣುಕಾ ಪೂಜಾರಿ, ಸುಶೀಲಾ ಕೆ.ಎಮ್, ಸರೋಜಾ ಶ್ಯಾನುಭಾನ್, ಯಶೋದಾ, ಕುಮಾರಿ ಮಿನುತಾ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮರವಂತೆ ಭಾಗದ ಮಹಿಳೆಯವರು ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಜೇಸಿಐ ಬೈಂದೂರು ಸಿಟಿಯ ಜೇಸಿರೆಟ್ ಕಾರ್ಯದರ್ಶಿ ಜೇಸಿರೆಟ್ ಗುಲಾಬಿ ಪೂಜಾರಿ ಅವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

 

Exit mobile version