Site icon Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಇಂದೂಧರ ಸಭಾಭವನ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಇಂದೂಧರ ದೇವಸ್ಥಾನ 75 ವರ್ಷಗಳಿಂದ ಗಂಗೊಳ್ಳಿ ಪರಿಸರದಲ್ಲಿ ಧರ್ಮ ಜಾಗೃತಿ ಮೂಡಿಸುತ್ತಾ ಬಂದಿದೆ. ಈಗ ಸರ್ಕಾರದ ಅನುದಾನ ಮತ್ತು ದಾನಿಗಳ ನೆರವು ಕ್ರೋಢೀಕರಿಸಿಕೊಂಡು ಸುಂದರವಾದ ಸಭಾಭವನ ನಿರ್ಮಿಸಿದೆ. ಇದಕ್ಕೆ ನಿವೇಶನ ದಾನ ಮಾಡಿರುವ ಉದ್ಯಮಿ ಎಚ್. ಗಣೇಶ ಕಾಮತ್ ಅಭಿನಂದನಾರ್ಹರು ಎಂದು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು.

ಅವರು ಗಂಗೊಳ್ಳಿಯಲ್ಲಿ ನಡೆದ ಇಂದೂಧರ ದೇವಸ್ಥಾನದ ಅಮೃತ ಮಹೋತ್ಸವ ವರ್ಷದ ಸಮಾರೋಪ ಸಮಾರಂಭ ಮತ್ತು ನೂತನ ಸಭಾಭವನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಚ್.ಗಣೇಶ ಕಾಮತ್ ನೂತನ ಸಭಾಭವನ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಉಪಾದ್ಯಕ್ಷೆ ಪ್ರೇಮಾ ಸಿ. ಪೂಜಾರಿ, ಮತ್ಸ್ಯೋದ್ಯಮಿ ಮಂಜುನಾಥ ಜಿ.ಟಿ, ನಿವೃತ್ತ ಮುಖ್ಯ ಶಿಕ್ಷಕ ಮುಡೂರ, ಗ್ರಾಮ ಪಂಚಾಯಿತಿ ಸದಸ್ಯ ಬಿ. ಗಣೇಶ ಶೆಣೈ, ಬಿ. ರಾಘವೇಂದ್ರ ಪೈ, ದೇವು ಶಿಪಾ, ಬಿ. ಲಕ್ಷ್ಮೀಕಾಂತ ಮಡಿವಾಳ, ಭಜನಾ ತರಬೇತಿದಾರ ಜಗದೀಶ ನಾಯಕವಾಡಿ, ಇಂದೂಧರ ಯುವಕ ಮಂಡಲದ ಗೌರವ ಅಧ್ಯಕ್ಷ ಗುರುರಾಜ್ ಬಿ, ದೇವಸ್ಥಾನದ ಮೊಕ್ತೇಸರ ಸಂಜೀವ ಜಿ. ಟಿ. ಇದ್ದರು.

ಮಾಜಿ ಮಂಡಲ ಪ್ರಧಾನ ಬಿ. ಸದಾನಂದ ಶೆಣೈ, ಎಚ್. ಗಣೇಶ ಕಾಮತ್ ಮತ್ತು ದೇವಸ್ಥಾನದ ಪ್ರಧಾನ ಅರ್ಚಕ ಶಿವಾನಂದ ಜಿ. ಟಿ. ಅವರನ್ನು ಸನ್ಮಾನಿಸಲಾಯಿತು. ದೇವಸ್ಥಾನದ ಅಧ್ಯಕ್ಷ ಸುಂದರ ಬಿ. ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀನಿ ವಾಸ ಬಿ. ವಂದಿಸಿದರು.

Exit mobile version