Kundapra.com ಕುಂದಾಪ್ರ ಡಾಟ್ ಕಾಂ

ಕಶ್ವಿ ಚೆಸ್ ಸ್ಕೂಲ್ ರ‍್ಯಾಪಿಡ್ ಚೆಸ್ ಪಂದ್ಯಾಟ, ಬಹುಮಾನ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಶ್ವಿ ಚೆಸ್ ಸ್ಕೂಲ್‌ನಲ್ಲಿ ರ‍್ಯಾಪಿಡ್ ಚೆಸ್ ಪಂದ್ಯಾವಳಿ ನಡೆಯಿತು.

ಮುಕ್ತ ವಿಭಾಗದ ಚೆಸ್ ಪಂದ್ಯಾಟದಲ್ಲಿ ಕೋಟ ವಿವೇಕ ಆಂಗ್ಲ ಮಾಧ್ಯಮ ಶಾಲೆಯ ಕಾರ್ತಿಕ್ ಪ್ರಥಮ, ಸೇಂಟ್ ಪಿಯುಸ್ ಆಂಗ್ಲ ಮಾಧ್ಯಮ ಶಾಲೆಯ ನಿಶಾಂತ್ ಡಿಸೋಜ್ ದ್ವಿತೀಯ ಸ್ಥಾನ, ದಾವಣಗೆರೆಯ ಯುರೋ ಆಂಗ್ಲ ಮಾಧ್ಯಮ ಶಾಲೆಯ ನಿಶ್ಚಲ್.ಜಿ.ಎಸ್ ತ್ರತೀಯ ಸ್ಥಾನಗಳಿಸಿದರು.

ಗೋಲ್ಡನ್ ಮತ್ತು ಸಿಲ್ವರ್ ಗ್ರೂಪ್‌ನ ಮುಕ್ತ ವಿಭಾಗದಲ್ಲಿ ತೀರ್ಥಹಳ್ಳಿ ಸೇವಾ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಪಾವನಿ.ಆರ್ ಪ್ರಥಮ ಸ್ಥಾನ, ಬೆಂಗಳೂರಿನ ದಿ ರಿಜೇನ್ಸಿ ಆಂಗ್ಲ ಮಾಧ್ಯಮ ಶಾಲೆಯ ಭುವನ್.ಜಿ.ಎಸ್ ದ್ವಿತೀಯ ಸ್ಥಾನ, ತೀರ್ಥಹಳ್ಳಿ ಸೇವಾ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಗಾನವಿ. ಆರ್ ತೃತೀಯ ಸ್ಥಾನಗಳಿಸಿದರು.

ಹಾಗೂ ಸ್ಟಾರ್ ಗ್ರೂಪ್‌ನ ಮುಕ್ತ ವಿಭಾಗದಲ್ಲಿ ದಾವಣಗೆರೆಯ ಆರೆಂಜ್ ಟೋಟ್ಸ್ ಇಂಟರನ್ಯಾಷನಲ್ ಪ್ರೀ ಸ್ಕೂಲ್‌ನ ಆಕಾಶ್.ಜಿ.ಎಸ್ ಪ್ರಥಮ ಸ್ಥಾನ, ಮಹಾರಾಷ್ಟ್ರದ ಪವರ್ ಪಬ್ಲಿಕ್ ಸ್ಕೂಲ್‌ನ ಸ್ವಸ್ತಿಕ್ ಶೇರೆಗಾರ್ ದ್ವಿತೀಯ ಸ್ಥಾನ, ಬ್ರಹ್ಮಾವರ ಲಿಟಲ್ ರಾಕ್ ಇಂಡಿಯನ್ ಆಂಗ್ಲ ಮಾಧ್ಯಮ ಶಾಲೆಯ ಇಶಾನ್ ಪ್ರಭು ತೃತೀಯ ಸ್ಥಾನ, ಸುಳ್ಯದ ಸಂತ ಜೋಸೆಫ್‌ರ ಆಂಗ್ಲ ಮಾಧ್ಯಮ ಶಾಲೆಯ ಅವನಿ.ಎಮ್.ಎಸ್ ಚತುರ್ಥ ಸ್ಥಾನ, ಓಕ್ ವುಡ್ ಇಂಡಿಯನ್ ಆಂಗ್ಲ ಮಾಧ್ಯಮ ಶಾಲೆಯ ಶ್ರೀಹರ್ಷ ಪಂಚಮ ಸ್ಥಾನಗಳಿಸಿದರು.

ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಮುಖ್ಯ ಅಥಿತಿಯಾಗಿ ಕುಂದಾಪುರದ ಸಹಾಯಕ ಆಯುಕ್ತರಾದ ರಾಜು. ಕೆ. ಮಾತನಾಡಿ, ಚೆಸ್ ಕಲಿಕೆ ಮತ್ತು ಆಟವು ವಿದ್ಯಾರ್ಥಿಗಳನ್ನು ಬೌದ್ಧಿಕ ಮತ್ತು ಶಾರೀರಿಕವಾಗಿ ಉತ್ತಮಗೊಳ್ಳಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ಹಾಗೂ ಕಶ್ವಿ ಚೆಸ್ ಸ್ಕೂಲ್‌ನ ವಿದ್ಯಾರ್ಥಿಯಾದ ನಿಶಾಂತ್ ಡಿಸೋಜಾ, ಉತ್ತಮ ಸಾಧಕರಾದ ಮನನ್ ಶೆಟ್ಟಿ ಹಾಗೂ ಕಶ್ವಿ ಸ್ಕೂಲ್‌ನ ತರಬೇತುದಾರರಾದ ರೂಪ ಶೆಟ್ಟಿ ಉಪಸ್ಥಿತರಿದ್ದರು.

ಕಶ್ವಿ ಚೆಸ್ ಸ್ಕೂಲ್‌ನ ತರಬೇತುದಾರರಾದ ಅಣ್ಣಪ್ಪ ದೇವಾಡಿಗ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಪಂದ್ಯಾವಳಿಯನ್ನು ಕಶ್ವಿ ಚೆಸ್ ಸ್ಕೂಲ್‌ನ ತರಬೇತುದಾರರಾದ ಕಿರಣ್ ಮತ್ತು ಧನ್‌ರಾಜ್ ಬಸ್ರೂರು ಸಾಂಘೀಕವಾಗಿ ನಡೆಸಿ ಕೊಟ್ಟರು.


Exit mobile version