Site icon Kundapra.com ಕುಂದಾಪ್ರ ಡಾಟ್ ಕಾಂ

ರಾಜ್ಯ ಟೈಲರ್ಸ್ ಅಸೋಸಿಯೇಷನ್ ಬೈಂದೂರು ವಲಯ: ಟೈಲರ್ಸ್ ದಿನಾಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಾಜ್ಯ ಟೈಲರ್ಸ್ ಅಸೋಸಿಯೇಷನ್ ಬೈಂದೂರು ವಲಯದಿಂದ ‘ಟೈಲರ್ಸ್ ದಿನಾಚರಣೆ’ ಕಾರ್ಯಕ್ರಮವು ಇಲ್ಲಿನ ಸೇವಾ ಸಂಗಮ ಶಿಶು ಮಂದಿರದಲ್ಲಿ ನಡೆಯಿತು.

ರಾಜ್ಯ ಟೈಲರ್ಸ್ ಅಸೋಸಿಯೇಷನ್ ಬೈಂದೂರು ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ನವೀನ್ ಟೈಲರ್ ಕೊಲ್ಲೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶಿಶು ಮಂದಿರದ ಅಧ್ಯಕ್ಷರಾದ ಮಂಜುನಾಥ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ನಾವು ಜೀವನದಲ್ಲಿ ಕ್ರೀಯಾಶೀಲರಾಗಿರಬೇಕಾದರೆ ಇಂತಹ ಸಂಘ ಸಂಸ್ಥೆಗಳನ್ನು ಸೇರಿಕೊಂಡು ನಮ್ಮ ಪ್ರತಿಭೆಯನ್ನು ಮತ್ತು ಪರಿಶ್ರಮವನ್ನು ಪ್ರಾಮಾಣಿಕವಾಗಿ ತೋರಿಸಿಕೊಂಡಾಗ ಸಂಘ ಬೆಳೆಯುವುದರೊಂದಿಗೆ ನಾವು ಸಾಮಾಜಿಕವಾಗಿ ಬೆಳೆದು ಪ್ರಜ್ಞಾವಂತ ಪ್ರಜೆಯಾಗುವುದಕ್ಕೆ ಆಗುತ್ತದೆ. ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಒಂದು ಸಂಘಟನೆ ಬೇಕು. ಅದುವೇ ನಮ್ಮ ಶಕ್ತಿ ಎಂದು ಹೇಳಿದರು. ಹಾಗೂ ಆರ್ಥಿಕವಾಗಿ ಕಷ್ಟದಲ್ಲಿರುವವರಿಗೆ ಒಂದು ಹೊಲಿಗೆ ಯಂತ್ರವನ್ನು ಕೊಡುವುದಾಗಿ ಹೇಳಿದರು.

ಕ್ಷೇತ್ರದ ಕಾರ್ಯದರ್ಶಿ ಲಕ್ಷ್ಮೀ ರಾಘವೇಂದ್ರ ಬಂಕೇಶ್ವರ ಒಂದು ಹೊಲಿಗೆ ಯಂತ್ರ ಕೊಡುವುದಾಗಿ ಹೇಳಿದರು. ಕೋಶಾಧಿಕಾರಿ ಆಶಾ ದಿನೇಶ ಪ್ರಾಸ್ತಾವಿಕ ಮಾತನಾಡಿದರು. ಬೈಂದೂರು ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ಮಹಾಬಲ ಟೈಲರ್ ಉಪಸ್ಥಿತರಿದ್ದರು. ಚಂದ್ರ ಚಿತ್ತೂರು ಶುಭ ಸಂಶನೆಗೈದರು. ನಾಗೇಂದ್ರ ಚಿತ್ತೂರು ಕಾರ್ಯಕ್ರಮ ನಿರೂಪಿಸಿದರು. ಸಭಾಕಾರ್ಯಕ್ರಮದ ನಂತರ ಸದಸ್ಯರಿಗಾಗಿ ಆಟೋಟ ಸ್ಪರ್ಧೆ ಏರ್ಪಡಿಸಲಾಯಿತು. ಹಾಗೂ ಸುಪ್ರೀತಾ ಚಿತ್ತೂರು ವಂದಿಸಿದರು.

Exit mobile version