Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಸಾಧಕ ಮಹಿಳೆಯರಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಡಾ. ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಹಿಳಾ ಸಬಲೀಕರಣ ಘಟಕ ಹಾಗೂ ಜೇಸಿರೆಟ್ ವಿಂಗ್ ಆಫ್ ಜೆಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯನ್ನು ಸನ್ಮಾನಿಸಲಾಯಿತು.

ಡಾ. ಶ್ರಾವ್ಯ (ಸಮಾಜಸೇವೆ), ಮಮತಾ ಆರ್. ಶೆಟ್ಟಿ ಹದ್ದೂರು (ಕೃಷಿ), ಲಿರಾ ಜೂಲಿಯೇಟ್ (ವ್ಯಾವಹಾರಿಕ), ಡಾ. ಸರೋಜಿನಿ (ಶಿಕ್ಷಣ), ನಿವೇದಿತಾ ತೃತೀಯ ಬಿ.ಕಾಂ. (ಕ್ರೀಡೆ), ಶುಭಲಕ್ಷ್ಮೀ, ದ್ವಿತೀಯ ಬಿ.ಬಿ.ಎ. (ಶಿಕ್ಷಣ) ಇವರನ್ನು ಸನ್ಮಾನಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ, ಜೇಸಿ ಅಕ್ಷತಾ ಶೆಟ್ಟಿ ನಿರ್ದೇಶಕರು, ಜೇಸಿರೆಟ್ ವಿಭಾಗ, ಜೇಸಿ ಆಯಿಷಾ ಫೈಜಾ, ವಲಯ ಸಂಯೋಜಕರು, ವಿಜಯ ಭಂಡಾರಿ, ಅಧ್ಯಕ್ಷರು ಜೆಸಿಐ ಕುಂದಾಪುರ ಸಿಟಿ, ಉಪಾಧ್ಯಕ್ಷ ಅಭಿಲಾಷ್, ಪ್ರಶಾಂತ್ ಹವಾಲ್ದಾರ್, ವಲಯಾಧಿಕಾರಿ ಜೆಸಿಐ ಕುಂದಾಪುರ ಸಿಟಿ, ಜೆಸಿಐ ಕುಂದಾಪುರ ಸಿಟಿಯ ನಿಕಟಪೂರ್ವ ಅಧ್ಯಕ್ಷರಾದ ರೇಖಾ, ನ್ಯಾಯವಾದಿ ಜಯಚಂದ್ರ ಶೆಟ್ಟಿ, ಕಾಲೇಜಿನ ಮಹಿಳಾ ಸಬಲೀಕರಣ ಘಟಕದ ಸಂಯೋಜಕರಾದ ನಿಶಾ ಶೆಟ್ಟಿ, ಶ್ವೇತಾ ಶೆಟ್ಟಿ, ದೀಕ್ಷಿತಾ ಯು.ಜಿ. ಮತ್ತಿತರರು ಉಪಸ್ಥಿತರಿದ್ದರು.

ಜೇಸಿರೆಟ್ ವಿಭಾಗದ ಅಧ್ಯಕ್ಷೆ ಡಾ. ಸೋನಿ ಸ್ವಾಗತಿಸಿದರು. ಜೆಸಿಐ ಕುಂದಾಪುರ ಸಿಟಿಯ ಸ್ಥಾಪಕಾಧ್ಯಕ್ಷ ಹುಸೈನ್ ಹೈಕಾಡಿ ಪ್ರಸ್ತಾವಿಸಿದರು. ಕನ್ನಡ ಉಪನ್ಯಾಸಕರಿ ರೇಷ್ಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯ ಉಪನ್ಯಾಸಕಿ ಧನಶ್ರೀ ಎಂ. ಕಿಣಿ ವಂದಿಸಿದರು. ವಿದ್ಯಾರ್ಥಿನಿ ಸುಜಾತಾ ಖಾರ್ವಿ ಪ್ರಾರ್ಥಿಸಿದರು.

Exit mobile version