Kundapra.com ಕುಂದಾಪ್ರ ಡಾಟ್ ಕಾಂ

ಬ್ರಾಹ್ಮಣ ಪರಿಷತ್ತಿನ 26ನೇ ವಾರ್ಷಿಕ ಅಧಿವೇಶನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬ್ರಾಹ್ಮಣರು ಪ್ರತಿನಿತ್ಯವು ನಿತ್ಯನೇಮಿತ್ತಿಕ ಕರ್ಮಗಳನ್ನು ಮಾಡುವುದರಿಂದ ಮಾತ್ರ ಬ್ರಾಹ್ಮಣ್ಯ ಉಳಿಸಲು ಸಾದ್ಯ, ಬ್ರಾಹ್ಮಣರು ಧಾರ್ಮಿಕ ಆಚರಣೆಯಲ್ಲಿ ಆಶೃಧ್ಯೆ ಮತ್ತು ಉದಾಸಿನತೆ ಮಾಡಿದರೆ ರಾಕ್ಷಸಿ ಪ್ರವೃತ್ತಿಯವರು ಹಾಗೂ ವಿದ್ವಂಸಕಾರರು ಪ್ರಬಲರಾಗುತ್ತ ಹೋಗುತ್ತಾರೆ, ಇದಕ್ಕಾಗಿಯೇ ಬ್ರಾಹ್ಮಣರು ಸುಸ್ಕೃಂತ ಹಾಗೂ ಸಾತ್ವಿಕ ಸಮಾಜ ರೂಪಿಸುವ ದೊಡ್ಡ ಜವಬ್ದಾರಿಯಿದ್ದು ಸಮರ್ಪಣಾ ಮನೋಭಾವವನ್ನು ಹೊಂದಿರಬೇಕು ಎಂದು ಕುಂದಾಪುರ ತಾಲೂಕು ಹಾಲಾಡಿ ಪಿ.ಯು ಕಾಲೇಜು ಉಪನ್ಯಾಸಕ ಗಣಪತಿ ಹೆಗ್ಡೆ ಹೇಳಿದರು.

ಅವರು ಉಪ್ಪುಂದ ಅರೆಹಾಡಿ ಶ್ರೀ ಜಟ್ಟಿಗೇಶ್ವರ ದೇವಸ್ಥಾನದಲ್ಲಿ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯದ 26ನೇ ವಾರ್ಷಿಕ ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಪ್ರಧಾನ ಉಪನ್ಯಾಸ ನೀಡುತ್ತಾ ಪ್ರಸಕ್ತ ಸಮಾಜ ಆಧುನಿಕ ಜೀವನ ಶೈಲಿ ಮತ್ತು ಅತಿಯಾದ ಮೊಬೈಲ್ ಮತ್ತು ಟಿ.ವಿ ಬಳಕೆಯಿಂದ ಪಾರಂಪರಿಕ ಜೀವನ ಪದ್ಧತಿ ಮರೆಯಾಗುತ್ತಿದ್ದು ಯುವ ಜನಾಂಗಕ್ಕೆ ಸಂಸ್ಕ್ರತಿಕ ಮತ್ತು ಸಂಸ್ಕಾರಯುತ ಜೀವನ ಶೈಲಿಯನ್ನು ಪರಿಚಯಿಸುವ ಮಹತ್ವದ ಕಾರ್ಯ ಸಮಾಜದ ಹಿರಿಯರು ಹಾಗೂ ಸಂಘಟನೆಯ ಮೂಲಕ ಆಗಬೇಕಾಗಿದೆ ಎಂದು ಹೇಳಿದರು,

ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಅಧ್ಯಕ್ಷ ಆನಂತಪದ್ಮನಾಭ ಬಾಯರಿ ಜ್ಯೋತಿ ಅದಿವೇಶನ ಉದ್ಧಾಟಿಸಿದರು, ಸಂದರ್ಭದಲ್ಲಿ ಹಾಪ್‌ಕಾಮ್ಸ್ ನಿರ್ದೇಶಕರಾದ ಅನ್ನಾಪೂರ್ಣ ಉಡುಪ ಚನ್ನಕೇಶವ ಕಾರಂತ, ಗ್ರಾ. ಪಂ. ಸದಸ್ಯೆ ರೇಷ್ಮಾ ಸಂದೇಶ ಭಟ್, ಅಂಗವಿಕಲಕ ವಿಶೇಷ ಸಾಧನೆಗೆ ಮಂಜುನಾಥ ಹೆಬ್ಬಾರ್, ಕಂಬಳ ಕ್ಷೇತ್ರ ಯುವ ಪ್ರತಿಭೆ ಕು. ಚೈತ್ರಾ, SSಐಅ ನಲ್ಲಿ 5ನೇ ರ‍್ಯಾಂಕ್ ವಿಜೇತ ಕು. ಮೈತ್ರೇಯಿ, 6ನೇ ರ‍್ಯಾಂಕ ವಿಜೇತ ಕವನಾ ಭಟ್ , 8ನೇ ರ‍್ಯಾಂಕ್ ವಿಜೇತ ಸ್ಕಂದ ಐತಾಳ್, ಪಿಯೂ ವಿಶೇಷ ಸಾಧನೆಗೆ ನಾವುಂದ ಕು. ಕವನ ನಾವುಡ, ಕು. ಅನ್ನಾಪೂರ್ಣ ಕಾರಂತ, ಕು. ಭವನಾ ಕಾರಂತ ಇಂಡಿಯನ್ ಆರ್ಮಿಯ ನಿವೃತ್ತ ಸುಭೆದಾರ್ ಸಬ್ ಮೇಜರ್ ಉಪ್ಪುಂದ ಸುಬ್ರಹ್ಮಣ್ಯ ವೈದ್ಯ ಹಾಗೂ ಪೋಲಿಸ್ ಇಲಾಖೆಯ ನಿವೃತ್ತ ಅಧಿಕಾರಿ ಹೆಚ್. ಪದ್ಮನಾಭ್ ಮೆರ್ಟಾ ಅವರನ್ನು ವಿಶೇಷ ಸಾಧನೆಗಾಗಿ ಸನ್ಮಾನಿಸಲಾಯಿತು.

ಉಪ್ಪುಂದ ವಲಯದ ಅಧ್ಯಕ್ಷ ಯು. ಸಂದೇಶ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಪ್ರತಿಭಾ ಪುರಾಸ್ಕಾರ ಪ್ರಾಯೋಜಕ ಉದ್ಯಮಿ ಕೆ. ಉಮೇಶ ಶ್ಯಾನುಭೋಗ್ ಮುಖ್ಯ ಅತಿಥಿಯಾಗಿದ್ದರು, ಗೌರವಾಧ್ಯಕ್ಷ ವಿ. ವಿಶ್ವೇಶ್ವರ ಅಡಿಗ, ಕಾರ್ಯದರ್ಶಿ ಅರುಣಕುಮಾರ ಶ್ಯಾನುಬೋಗ್, ಕೋಶಾಧ್ಯಕ್ಷ ಹೆಚ್ ಜಗದೀಶ್ ರಾವ್, ಮಹಿಳಾವೇದಿಕೆ ಅಧ್ಯಕ್ಷೆ ಸುಮತಿ ಮೆರ್ಟಾ, ಯುವ ವೇದಿಕೆ ಅಧಕ್ಷ ಪದ್ಮನಾಭ ಹೆಬ್ಬಾರ್, ಮುಖ್ಯ ಅಥಿತಿಗಳಾಗಿ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ| ಕೆ.ಎಸ್.ಕಾರಂತ, ಬ್ರಾಹ್ಮಣ ಅಭಿವ್ವಧ್ದಿ ಮಂಡಳಿ ಬೆಂಗಳೂರು ನಿರ್ದೇಶಕರಾದ ಶಿವರಾಮ ಉಡುಪ, ಕಾರ್ಯಕ್ರಮದ ಪ್ರಯೋಜಕ ಯು.ಕೆ.ಪಿ.ಬಿ ಟ್ರಸ್ಟನ ಸದಸ್ಯ ಯು. ವೆಂಕಟರಮಣ ಭಟ್ ತಾಲೂಕು ಕಾರ್ಯದರ್ಶಿ ರತ್ನಾಕರ ಉಡುಪ, ತಾಲೂಕು ಮಹಿಳಾ ವೇದಿಕೆ ಅಧಕ್ಷೆ ಭಾವನಾ. ಎಂ ಭಟ್ ಉಪಸ್ಥಿತರಿದ್ದರು.

ವೇದಮೂರ್ತಿ ಚಿದಾನಂದ ಶ್ಯಾನೂಭೋಗ್ ವೇದಘೋಷ ಮಾಡಿದರು, ಹೇಮಾ ಹೊಳ್ಳಾ ಪ್ರಾರ್ಥಿಸಿದರು, ಅರುಣಕುಮಾರ ಶ್ಯಾನುಭೋಗ್ ಸ್ವಾಗತಿಸಿದರು ಹೆಚ್. ಜಗದೀಶ ರಾವ್ ವಂದಿಸಿದರು, ಪ್ರಶಾಂತ ಮಯ್ಯ ಕಾರ್ಯಕ್ರಮ ನಿರೂಪಿಸಿದರು.

Exit mobile version