Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್‌ನಲ್ಲಿ ನ್ಯಾನೋ ಟೆಕ್ನಾಲಜಿ ನೂತನ ಲ್ಯಾಬ್ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡಬಿದಿರೆ: ಆಳ್ವಾಸ್ ನ್ಯಾನೋ ಟೆಕ್ನಾಲಜಿ ಸಂಶೋಧನ ಕೇಂದ್ರದ ನೂತನ ಲ್ಯಾಬ್ ಮತ್ತು ಕಾನ್ಫರೆನ್ಸ್ ಹಾಲ್‌ನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ಉದ್ಘಾಟಿಸಿದರು.

ನ್ಯಾನೋ ಟೆಕ್ನಾಲಜಿ ಸಂಶೋಧನ ಕೇಂದ್ರದ ಮುಖ್ಯಸ್ಥೆ ಡಾ.ಜೆನಿಟಾ ಸಂಶೋಧನ ಕೇಂದ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು. ‘ನ್ಯಾನೋ ಟೆಕ್ನಾಲಜಿ ಸಂಶೋಧನ ಕೇಂದ್ರವು 20219ರಲ್ಲಿ ಆರಂಭಗೊಂಡಿದ್ದು ಇದುವರೆಗೆ ಈ ಲ್ಯಾಬ್‌ನಲ್ಲಿ ಸಾಕಷ್ಟು ಸಂಶೋಧನೆಗಳು ನಡೆದಿವೆ. 52 ವಿದ್ಯಾರ್ಥಿಗಳು ನ್ಯಾನೋ ಟೆಕ್ನಾಲಜಿ ಕುರಿತು ರಿಸರ್ಚ್ ಪ್ರಾಜೆಕ್ಟ್‌ಗಳನ್ನು ಕೈಗೊಂಡಿದ್ದು, ಈ ಸಂಶೋಧನ ಕೇಂದ್ರದಿಂದ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ 92 ಸರ್ಟಿಫಿಕೇಟ್ ಕೋರ್ಸ್‌ಗಳನ್ನು ನೀಡಲಾಗುತ್ತಿದೆ. ನ್ಯಾನೋ ಸೈನ್ಸ್ ಹಾಗೂ ಟೆಕ್ನಾಲಜಿಗೆ ಸಂಬಂಧಿಸಿದ ಈ ಲ್ಯಾಬ್‌ನಲ್ಲಿ ಆಯುರ್ವೇದ, ಹೋಮಿಯೋಪತಿ ಸೇರಿದಂತೆ ಪದವಿ ಹಾಗೂ ಸ್ನಾತಕೋತ್ತರ ಪದವಿಯ ಲೈಫ್‌ಸೈನ್ಸ್ ವಿದ್ಯಾರ್ಥಿಗಳು ತಮ್ಮ ಸಂಶೋಧನೆಗಳನ್ನು ಮಾಡಲು ಅವಕಾಶವಿದೆ’ ಎಂದರು.

ಈ ಸಂಶೋಧನಾ ಕೇಂದ್ರದ ವಿದ್ಯಾರ್ಥಿಗಳು ಮಾಡಿದ ಸಂಶೋಧನ ವರದಿಗಳು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಜರ್ನಲ್‌ಗಳಲ್ಲಿ ಪ್ರಕಟಗೊಂಡಿವೆ. ಆಳ್ವಾಸ್ ನ್ಯಾನೋ ಟೆಕ್ನಾಲಜಿ ಸಂಶೋಧನಾ ಕೇಂದ್ರವು ಸಂಪೂರ್ಣ ಸೌಲಭ್ಯಗಳನ್ನು ಹೊಂದಿದ್ದು, ಸಂಶೋಧನೆಗೆ ಬೇಕಾದ ಪೂರಕ ವಾತಾವರಣ ಕಲ್ಪಿಸಿದೆ. ಸಂಶೋಧನಾ ವಿದ್ಯಾರ್ಥಿಗಳಿಗೆ ಡಾ. ಮೋಹನ್ ಆಳ್ವಾ ಅವರು ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಸ್ನಾತಕೋತ್ತರ ಬಯೋ ಟೆಕ್ನಾಲಜಿ ವಿಭಾಗದ ಮುಖ್ಯಸ್ಥ ಡಾ. ರಾಮ ಭಟ್ ಉಪಸ್ಥಿತರಿದ್ದರು. ಹೋಮಿಯೋಪತಿ ವಿದ್ಯಾರ್ಥಿ ಡಾ.ನಸ್ಲಾ ನಿರೂಪಿಸಿದರು.

Exit mobile version