Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಸಾಧಕರಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ: ಗಂಗೊಳ್ಳಿ ಶ್ರೀ ಇಂದುಧರ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ 26ನೇ ಮಹೋತ್ಸವದ ಪ್ರಯುಕ್ತ ಗಂಗೊಳ್ಳಿಯ ಶ್ರೀ ಇಂದುಧರ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಉಡುಪಿ ಜಿಲ್ಲಾ ಮಟ್ಟದ ಆಹ್ವಾನಿತ ಬಾಲಕ ಬಾಲಕಿಯರ ಭಜನಾ ವೈವಿಧ್ಯತೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಜರಗಿತು.

ಗಂಗೊಳ್ಳಿಯ ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಮತ್ಸ್ಯೋದ್ಯಮಿ ಜಿ.ಟಿ.ಮಂಜುನಾಥ ಶುಭ ಹಾರೈಸಿದರು. ಈ ಸಂದರ್ಭ ಸಾಹಿತಿ ನರೇಂದ್ರ ಎಸ್.ಗಂಗೊಳ್ಳಿ, ಕಲಾವಿದ ಗಣೇಶ ಗಂಗೊಳ್ಳಿ, ಪತ್ರಕರ್ತ ಬಿ.ರಾಘವೇಂದ್ರ ಪೈ, ಭಜನಾ ಸಾಧಕರಾದ ಮಾಸ್ತಿ ಪೂಜಾರಿ ನಾಯಕವಾಡಿ, ಪದ್ಮಾವತಿ ಬಿ., ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ ಜಿ.ಈಶ್ವರ, ಸುಂದರ ಬಿ. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸ.ವಿ.ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ದೇವ್, ದೇವಸ್ಥಾನದ ಉಪಾಧ್ಯಕ್ಷ ಸುರೇಶ ಜಿ., ಮೊಕ್ತೇಸರ ಸಂಜೀವ ಜಿ.ಟಿ., ನರಸಿಂಹ ಕೆ., ಅರುಣ್ ಕುಮಾರ್ ಜಿ., ಸಂದೀಪ ಜಿ.ಎನ್., ಶ್ರೀಕಾಂತ ಎನ್., ವಿಘ್ನೇಶ ಜಿ.ಟಿ., ರಾಘವೇಂದ್ರ ಜಿ.ಟಿ., ಅರ್ಚಕ ಶಿವ ಜಿ.ಟಿ., ಗುರುರಾಜ್ ಬಿ., ಇಂದುಶ್ರೀ ಮಹಿಳಾ ಸಂಘದ ಸುಶೀಲಾ ಜಿ.ಟಿ., ಕಾರ್ಯದರ್ಶಿ ನಾಗಿಣಿ ಎನ್. ಮತ್ತಿತರರು ಉಪಸ್ಥಿತರಿದ್ದರು.

ಭಜನಾ ಸ್ಪರ್ಧೆಯಲ್ಲಿ ನಾಯಕವಾಡಿ-ಗುಜ್ಜಾಡಿಯ ಶ್ರೀ ರಾಮ ಭಗವಾನ್ ಬ್ರಹ್ಮಶ್ರೀ ನಾರಾಯಣ ಗುರು ಭಜನಾ ತಂಡ (ಪ್ರಥಮ), ಎಸ್.ವಿ.ಹಿರಿಯ ಪ್ರಾಥಮಿಕ ಶಾಲೆ ಬಾಲಕಿಯರ ತಂಡ (ದ್ವಿತೀಯ) ಮತ್ತು ಎಸ್.ವಿ.ಹಿರಿಯ ಪ್ರಾಥಮಿಕ ಶಾಲೆ ಬಾಲಕರ ತಂಡ (ತೃತೀಯ ಸ್ಥಾನ) ಪಡೆದುಕೊಂಡಿತು.

ದೇವಸ್ಥಾನದ ಅಧ್ಯಕ್ಷ ಸುಂದರ ಜಿ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶ್ರೀನಿವಾಸ ವಂದಿಸಿದರು.

Exit mobile version