Kundapra.com ಕುಂದಾಪ್ರ ಡಾಟ್ ಕಾಂ

ನಾವುಂದ: ಉಚಿತ ನೇತ್ರ ತಪಾಸಣಾ ಶಿಬಿರ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಣ್ಣಿನ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿವಾರಣಾ ಸಂಘ, ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರ, ನಾವುಂದ ಹಿಂದು ಅಭ್ಯುದಯ ಸಂಘ, ಲಯನ್ಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ನಾವುಂದ ಶ್ರೀ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಉದ್ಘಾಟನೆ ನಡೆಯಿತು .

ಉದ್ಘಾಟಿಸಿ ಮಾತನಾಡಿದ ಶಿರೂರು ಮುದ್ದುಮನೆ ಪಾರ್ವತಿ ಮಹಾಬಲ ಶೆಟ್ಟಿ ಕಣ್ಣಿನ ಆಸ್ಪತ್ರೆಯ ಯು. ಶಂಕರ ಶೆಟ್ಟಿ, ಕಣ್ಣು ಅತ್ಯಂತ ಅನಿವಾರ್ಯ ಅಂಗಗಳಲ್ಲಿ ಒಂದು. ಅದು ತೀರ ಸೂಕ್ಷ್ಮವೂ ಆಗಿರುವುದರಿಂದ ಅದರ ಆರೋಗ್ಯ ರಕ್ಷಣೆಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಹೇಳಿದರು.

ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮನೋಜ್ ಭಟ್ ಕಣ್ಣಿನ ಆರೋಗ್ಯ ಮತ್ತು ಸುರಕ್ಷತೆಗೆ ಅನುಸರಿಸಬೇಕಾದ ಕ್ರಮಗಳ ಮಾಹಿತಿ ನೀಡಿದರು. ಹಿಂದು ಅಭ್ಯುದಯ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಸ್ವಾಗತಿಸಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ನಿತ್ಯಾನಂದ ಆಚಾರ್ಯ ವಂದಿಸಿದರು. ಎ. ಶಿವರಾಮ ಮಧ್ಯಸ್ಥ ನಿರೂಪಿಸಿದರು.

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಭಾಗ್ಯಲಕ್ಷ್ಮೀ, ಲಯನ್ಸ್ ಕೋಶಾಧಿಕಾರಿ ಅಶೋಕ ಎನ್. ಶೆಟ್ಟಿ, ಹಿಂದು ಅಭ್ಯುದಯ ಸಂಘದ ಉಪಾಧ್ಯಕ್ಷ ಮನೋಹರ ಎನ್. ಕೆ ಇದ್ದರು. ಶಿಬಿರದಲ್ಲಿ 250 ಜನರು ನೇತ್ರ ಪರೀಕ್ಷೆ ಮಾಡಿಸಿಕೊಂಡರು.

Exit mobile version