Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಸಿಎ ಸಾಧಕ ಸಂಪತ್ ಶೆಟ್ಟಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಿಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಕಾವ್ರಾಡಿಯ ಮುಕ್ಕನಾಡಿ ಮನೆ ಸಂಪತ್ ಶೆಟ್ಟಿಯವರಿಗೆ ಅವರ ಸ್ವಗೃಹದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದಿಂದ ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಹೇರಿಕುದ್ರು ಹಾಗೂ ಸ್ಥಾಪಕ ಅಧ್ಯಕ್ಷ ಅಂಪಾರು ನಿತ್ಯಾನಂದ ಶೆಟ್ಟಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸಚಿನ್ ಕುಮಾರ್ ಶೆಟ್ಟಿ ಹುಂಚನಿ, ಶಿಕ್ಷಕ ಪ್ರದೀಪ್ ಶೆಟ್ಟಿ ಕಾವ್ರಾಡಿ, ಚೇತನ್ ಶೆಟ್ಟಿ ಕೋವಾಡಿ, ಅಕ್ಷಯ್ ಶೆಟ್ಟಿ ಮುಂಬಾರು, ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಶೆಟ್ಟಿ ಚೋರಮಕ್ಕಿ, ಸಂದೇಶ್ ಶೆಟ್ಟಿ ಮುಂಬಾರು, ಸಚಿನ್ ಶೆಟ್ಟಿ ವಕ್ವಾಡಿ, ಮಹೇಂದ್ರ ಶೆಟ್ಟಿ ಹಾಗೂ ಸಿ.ಎ ಸಾಧಕ ಸಂಪತ್ ಶೆಟ್ಟಿಯವರ ತಂದೆ ಶೇಖರ ಶೆಟ್ಟಿ, ತಾಯಿ ಪ್ರೇಮಲತಾ ಶೆಟ್ಟಿ, ಕುಟುಂಬಸ್ಥರು ಉಪಸ್ಥಿತರಿದ್ದರು.

Exit mobile version