ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಓಕ್ ವುಡ್ ಇಂಡಿಯನ್ ಸ್ಕೂಲ್‌ನಲ್ಲಿ ಈಚೆಗೆ ಮಹಿಳಾ ದಿನದ ಅಂಗವಾಗಿ ಹದಿಹರೆಯದವರಿಗೆ
ಗ್ರೆಸ್‌ಪುಲ್ ಗ್ರೋಯಿಂಗ್ ಎಂಬ ಬ್ಯಾನರ್ ಅಡಿಯಲ್ಲಿ 6 ಹಾಗೂ 7 ನೇ ತರಗತಿಯ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಯಿತು.
ಆಯುರ್ವೇದ ತಜ್ಞೆ ಡಾ.ಸ್ವಾತಿ ಶೇಟ್ ಮಾತನಾಡಿ, ಮಗುವಿನ ಜೀವನದ ಪ್ರಮುಖ ಹಂತದ ಬಗ್ಗೆ ಹಾಗೂ ವಯಸ್ಸಿನಲ್ಲಿ ಮಗುವಿನ ದೈಹಿಕ ಮತ್ತು ಭಾವನಾತ್ಮಕ ಬದಲಾವಣೆಗಳ ಕುರಿತು ವಿವರಿಸಿದರು.
ಕಾರ್ಯಾಗಾರವನ್ನು ಸಾಮಾನ್ಯ ಹಾಗೂ ಹುಡುಗಿಯರ ಆರೋಗ್ಯ ನೈರ್ಮಲ್ಯದ ಕುರಿತಾಗಿ ವಿಂಗಡಿಸಲಾಗಿತ್ತು. ಕಾರ್ಯಾಗಾರದಲ್ಲಿ ವಿದ್ಯಾಥಿ೯ಗಳು ಹಾಗೂ ಸಂಪನ್ಮೂಲ ವ್ಯಕ್ತಿ ಜತೆಗೆ ಪ್ರಶ್ನೋತ್ತರ ಸಂವಾದ ನಡೆಯಿತು.
ಪೋರ್ಟ್‌ಗೇಟ್ ಎಜುಕೇಷನ್ ಕಾರ್ಯದರ್ಶಿ ನೀತಾ ಎ.ಶೆಟ್ಟಿ ಸ್ವಾಗತಿಸಿದರು, ವಿಜೇತ ಪರಿಚಯಿಸಿದರು, ಸ್ನೇಹಾ ನಿರೂಪಿಸಿದರು, ಪ್ರಜ್ಞಾ ವಂದಿಸಿದರು.