Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಭಾರತ್ ಸಿನೆಮಾಸ್‌ನಲ್ಲಿ ಹೀರೋ ಚಿತ್ರತಂಡ, ಪ್ರೇಕ್ಷಕರೊಂದಿಗೆ ಸಂವಾದ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕೋಟೇಶ್ವರದಲ್ಲಿರುವ ಭಾರತ್ ಸಿನೆಮಾಮಾಸ್‌ಗೆ ಸೋಮವಾರ ಸಂಜೆ ಹೀರೋ ಚಿತ್ರತಂಡ ಭೇಟಿ ನೀಡಿ ಪ್ರೇಕ್ಷಕರೊಂದಿಗೆ ಒಂದಷ್ಟು ಹೊತ್ತು ಸಂವಾದ ನಡೆಸಿದರು. ಹೀರೋ ಚಿತ್ರದ ನಾಯಕ ನಟ ರಿಷಬ್ ಶೆಟ್ಟಿ,  ನಿರ್ದೇಶಕ ಎಂ. ಭರತ್‌ರಾಜ್, ನಟರಾದ ಪ್ರಮೋದ್ ಶೆಟ್ಟಿ, ಪ್ರದೀಪ್ ಶೆಟ್ಟಿ, ಕಿರಣ್ ಚಂದ್ರಶೇಖರ್, ರಕ್ಷಿತ್ ರಾಮಚಂದ್ರ, ಸಲ್ಮಾನ್ ಅಹಮ್ಮದ್, ಸುಹಾಸ್ ಶೆಟ್ಟಿ ಸೇರಿದಂತೆ ಚಿತ್ರತಂಡದ ಹಲವರು ಸಂದರ್ಭ ಇದ್ದರು.

ಲಾಕ್‌ಡೌನ್ ಬಳಿಕ ಕಡಿಮೆ ಅವಧಿಯಲ್ಲಿ ನಿರ್ಮಾಣವಾದ ಹೀರೋ ಸಿನೆಮಾ ಮಾರ್ಚ್ 5ರಂದು ಬಿಡುಗಡೆಗೊಂಡು ಯಶಸ್ವಿಯಾಗಿ ಸಾಗುತ್ತಿದ್ದು, ಪ್ರೇಕ್ಷಕವರ್ಗದಿಂದ ಉತ್ತಮ ಅಭಿಪ್ರಾಯ ಕೇಳಿಬಂದಿದೆ. ಈ ನಡುವೆ ಚಿತ್ರತಂಡ ಕೇಸ್ ಸ್ಟಡಿ ಕಂಟೆಸ್ಟ್ ಆಯೋಜಿಸಿದ್ದು ಚಿತ್ರದ ಕುರಿತಾಗಿ  ನಡೆಸುವ 50 ಉತ್ತಮ ಕೇಸ್ ಸ್ಟಡಿಯನ್ನು ಆರಿಸಿ ರಿಷಬ್ ಶೆಟ್ಟಿ ಫಿಲ್ಮ್ ಕಾರ್ಯಾಗಾರದಲ್ಲಿ ಭಾಗವಹಿಸುವ ಅವಕಾಶ ನೀಡಿದೆ.

 

Exit mobile version