ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ಸ್ನಾತಕೋತ್ತರ ವಿಭಾಗದ ವತಿಯಿಂದ ಪತ್ರಿಕೆಯ ಪುಟ ವಿನ್ಯಾಸದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ವಿಜಯ ಕರ್ನಾಟಕದ ಇನ್ಪೋಗ್ರಾಫಿಕ್ ಡಿಸೈನರ್ ಧರಣೇಶ್ ಕೆ.ಬಿ ವಿದ್ಯಾರ್ಥಿಗಳಿಗೆ ಪುಟ ವಿನ್ಯಾಸದ ಬಗ್ಗೆ ಮಾಹಿತಿ ನೀಡಿದರು.
ಪುಟ ವಿನ್ಯಾಸಕಾರನಿಗೆ ಸೌಂದರ‍್ಯ ಪ್ರಜ್ಞೆ ಅತ್ಯಗತ್ಯ. ಸುದ್ದಿ-ಮಾಹಿತಿಗಳನ್ನು ನೀಡುವುದಷ್ಟೇ ಅಲ್ಲ; ಓದುಗರಿಗೆ ಅದು ಅಷ್ಟೇ ಆಕರ್ಷಕವಾಗಿ ಕಾಣುವಂತೆ ನೀಡಬೇಕು. ಹೊಸ ತಂತ್ರಜ್ಞಾನಕ್ಕೆ ತಕ್ಕಂತೆ ಈಗಿನ ಯುವ ಪತ್ರಿಕೋದ್ಯಮ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ಪ್ರಾಯೋಗಿಕ ಪತ್ರಿಕೆಯನ್ನು ವೃತ್ತಿಪರ ಪತ್ರಿಕೆಯಂತೆ ವಿನ್ಯಾಸ ಗೊಳಿಸುವುದನ್ನು ಕಲಿಯಬೇಕು’ ಎಂದರು.
ಪತ್ರಿಕೆಯಲ್ಲಿ ಬಳಸುವ ಅಕ್ಷರಶೈಲಿಗಳ ಬಗ್ಗೆ ಹೇಳಿದ ಧರಣೇಶ್, ಸಾಮಾನ್ಯವಾಗಿ ಉಚಿತ ಕನ್ನಡ ಫಾಂಟ್‌ಗಳು ಲಭ್ಯವಿರುತ್ತವೆ. ಅವುಗಳು ಅಷ್ಟು ಆಕರ್ಷಕವಾಗಿರುವುದಿಲ್ಲ. ಆದರೆ ಪ್ರೀಮಿಯಂ ಫಾಂಟ್‌ಗಳನ್ನು ಬಳಸಿದಾಗ ಪುಟವು ಆಕರ್ಷವಾಗಿ ವಿನ್ಯಾಸಗೊಳ್ಳುತ್ತದೆ’ ಎಂದು ತಿಳಿಸಿದರು.
ಪುಟ ವಿನ್ಯಾಸದಲ್ಲಿ ಬಳಕೆಯಾಗುವ ಬಾಡಿ ಪ್ಯಾರಾ, ರಿವರ್ಸ್ ಹೆಡ್ಡಿಂಗ್, ಮಾರ್ಜಿನ್, ಪಾಯಿಂಟರ್ ಫೋಟೋ, ಫ್ಲೈಯರ್ ಸ್ಟೋರಿ, ಆಂಕರ ಸ್ಟೋರಿ, ಲೀಡ್, ಕಿಕ್ಕರ್, ಗಟ್ಟರ್ ಸ್ಪೇಸ್, ಪ್ಯಾರಗ್ರಾಫ್ ಸ್ಪೇಸ್, ಬ್ರೀದಿಂಗ್ ಸ್ಪೇಸ್, ಬಾಕ್ಸ್ ಐಟಮ್, ಫೋಟೋಗಳ ವಿಷಯಗಳ ಬಗ್ಗೆ ಪ್ರಾಯೋಗಿಕವಾಗಿ ಮಾಡಿ ತೋರಿಸಿದರು.
ಕಾರ್ಯಾಗಾರದಲ್ಲಿ ವಿಭಾಗದ ಸಂಯೋಜಕರಾದ ಪ್ರಸಾದ್ ಶೆಟ್ಟಿ, ಇತರ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.